ಮೂಡುಬಿದಿರೆ: ಎಲ್ಲ ಭಾಷೆಯಲ್ಲೂ ಸಂಸ್ಕೃತದ (Sanskrit)ನಂಟು ಇದೆ. ಭಾರತದಲ್ಲಿ ಹಿಂದೆ ಸಂಸ್ಕೃತವನ್ನು ಎಲ್ಲ ಸಮುದಾಯದವರು ಉಪಯೋಗಿಸಿದ್ದು, ಕಾಲಾಂತರದಲ್ಲಿ ಒಂದು ವರ್ಗದವರಿಗೆ ಮಾತ್ರ ಸೀಮಿತವಾಯಿತು. ಆದರೆ ಇತ್ತೀಚಿನ ದಿನಮಾನಗಳಲ್ಲಿ ಸಂಸ್ಕೃತದ ಬಳಕೆ ಹೆಚ್ಚುತ್ತಿದೆ ಎಂದು ಸಂಸ್ಕೃತ ಭಾರತಿಯ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖ್ ಡಾ.ಎಚ್.ಆರ್. ವಿಶ್ವಾಸ(Dr.H.R Vishwasa) ಹೇಳಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಸಂಸ್ಕೃತದ ಪ್ರಯೋಗ ಸಾಧ್ಯತೆ ಎಂಬ ವಿಷಯ ಕುರಿತು ಆಳ್ವಾಸ್ ಪದವಿ ಕಾಲೇಜಿನ (always degree College)ಕುವೆಂಪು ಸಭಾಂಗಣದಲ್ಲಿ ನಡೆದ ಪ್ರಜ್ಞಾ ಜಿಜ್ಞಾಸ ವೇದಿಹಿಃ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ರಮಾನಂದ ಭಟ್, ಡಾ. ವಿನಾಯಕ ಭಟ್ ಗಾಳಿಮನೆ ಉಪಸ್ಥಿತರಿದ್ದರು. ಸಿಂಧು ಭಟ್ ಕಾರ್ಯಕ್ರಮ ನಿರೂಪಿಸಿದರು.