ಮೂಡುಬಿದಿರೆ: ವೃತ್ತಿಯಲ್ಲಿ ಕೇವಲ ಹೆಸರು ಅಥವಾ ಹಣದ ಹಿಂದೆ ಹೋದರೆ ಉತ್ತಮ ಛಾಯಾಗ್ರಾಹಕ ಆಗಲು ಸಾಧ್ಯವಿಲ್ಲ. ಪತ್ರಿಕಾ ಛಾಯಾಗ್ರಹಣದಲ್ಲಿ ಆಸಕ್ತಿ, ಸ್ಪಂದನೆ ಬಹುಮುಖ್ಯ ಎಂದು ಪತ್ರಿಕಾ ಛಾಯಾಗ್ರಾಹಕ ಫಕ್ರುದ್ದೀನ್ ಎಚ್(Press Photographer Fakruddin) ಹೇಳಿದರು.
ಸಿ.ಎಸ್.ಇ.ಇ.ಟಿ ಪರೀಕ್ಷೆ: ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಧನೆ
ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ವಿಭಾಗದ ಅಭಿವ್ಯಕ್ತಿ ವೇದಿಕೆ(Abhivyakti Stage) ಆಯೋಜಿಸಲಾದ ಪತ್ರಿಕಾ ಛಾಯಾಗ್ರಹಣ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುಶ್ಮಿತಾ ಹಾಗೂ ವಿದ್ಯಾರ್ಥಿ ಸಂಯೋಜಕ ಆನಂದ ಕಾರ್ಯಕ್ರಮ ಸಂಘಟಿಸಿದರು. ವಿದ್ಯಾರ್ಥಿನಿ ಪವಿತ್ರಾ ನಿರೂಪಿಸಿ, ಉಪನ್ಯಾಸಕ ಹರ್ಷವರ್ಧನ ವಂದಿಸಿದರು.