ಮೂಡುಬಿದಿರೆ: ಇಂದಿನ ಯುವ ಜನತೆ ಸಂಹವನಕ್ಕೆ ಮಹತ್ವ ನೀಡದ ಕಾರಣ ಅದರ ಮಹತ್ವವು ಕುಂಠಿತಗೊಳ್ಳುತ್ತಿದೆ. ತಂತ್ರಜ್ಞಾನದ ಬೆಳವಣಿಗೆಯಿಂದ ಜನರು ಪರಸ್ಪರ ಸಂವಹನವನ್ನು ಮರೆಯುತ್ತಿದ್ದಾರೆ. ವಿದ್ಯಾರ್ಥಿಗಳು ಭಾಷಾ ಸ್ಪಷ್ಟತೆಯ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ಆದ್ಯ ಕಮ್ಯುನಿಕೇಶನ್‌ನ ಸಂಸ್ಥಾಪಕ ಚೆಂಗಪ್ಪ ಎ.ಡಿ ತಿಳಿಸಿದರು.
ಆಳ್ವಾಸ್ ಕಾಲೇಜಿನ ಪದವಿ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಪಬ್ಲಿಕ್ ರಿಲೇಶನ್ ಎಂಬ ವಿಷಯದ ಕುರಿತ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಪದವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ರೇಷ್ಮಾ ಉದಯ್ ಕುಮಾರ್, ಉಪನ್ಯಾಸಕಿ ರಕ್ಷಿತಾ ಕುಮಾರಿ ಉಪಸ್ಥಿತರಿದ್ದರು.
ಖದಿಜಾ ನುಹ ಸ್ವಾಗತಿಸಿದರು. ರಿತಿಕಾ ವಂದಿಸಿದರು. ಹನನ್ ಫಾತಿಮಾ ನಿರೂಪಿಸಿದರು.