ಮೂಡುಬಿದಿರೆ: ಮಂಗಳೂರು ವಿವಿಯಿಂದ (Mangalore University) ಗೌರವ ಡಾಕ್ಟರೇಟ್ ಪಡೆದ ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ (SKF Elixir India) ಸ್ಥಾಪಕ ಡಾ.ಜಿ ರಾಮಕೃಷ್ಣ ಆಚಾರ್ (Dr. G Ramakrishna Achar) ಅವರಿಗೆ ಮೂಡುಬಿದಿರೆ ಪೌರ ಸಂಮಾನ ಸಮಿತಿ ವತಿಯಿಂದ ಮೂಡುಬಿದಿರೆ ಪೌರ ಸಂಮಾನವು ಏಪ್ರಿಲ್ 2 ಸಂಜೆ 5ಕ್ಕೆ ಸ್ಕೌಟ್-ಗೈಡ್ಸ್ ಕನ್ನಡಭವನದಲ್ಲಿ (Scout-Guides Kannada Bhavan) ನಡೆಯಲಿದೆ.
ಇದನ್ನ ಓದಿ: ಎಸ್ ಕೆಡಿಆರ್ ಡಿಪಿಯಿಂದ ವಾತ್ಸಲ್ಯ ಕಿಟ್ ವಿತರಣೆ
ಆನೆಗುಂದಿ ಸಂಸ್ಥಾನ ಸರಸ್ವತಿಪೀಠದ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ (Sri Sri Kalahastendra Saraswati Swamiji), ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚರ್ಯಾವರ್ಯ ಸ್ವಾಮೀಜಿ ಉಪಸ್ಥಿತರಿರುವರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಧ್ಯಕ್ಷತೆವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ಲೆಕ್ಕ ಪರಿಶೋಧಕರ ಸಂಸ್ಥೆಯ ಮಾಜಿ ಅಧ್ಯಕ್ಷ ಎಸ್.ಎಸ್ ನಾಯಕ್, ಬಾಲಾಜಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ವಿಶ್ವನಾಥ ಪ್ರಭು, ಭದ್ರಾವತಿಯ ಉದ್ಯಮಿ ಎಚ್. ನಾಗೇಶ್, ಮೂಡುಬಿದಿರೆ ನಿಶ್ಮಿತಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ನಾರಾಯಣ ಪಿ.ಎಂ, ಧನಲಕ್ಷಿ, ಕ್ಯಾಶ್ಯೂ ಎಕ್ಸಪೋರ್ಟ್ಸ್ನ ಆಡಳಿತ ನಿರ್ದೇಶಕ ಕೆ.ಶ್ರೀಪತಿ ಭಟ್, ಅವಿಭಜಿತ ದ.ಕ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ, ಮೂಡುಬಿದಿರೆ ಗರುಮಠ ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೇಸರ ಜಯಕರ ಆಚಾರ್ಯ ಭಾಗವಹಿಸಲಿದ್ದಾರೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.