ಮೂಡುಬಿದಿರೆ: ಭಗವಾನ್ ಶ್ರೀ ಮಹಾವೀರರ 2922ನೇ ಜಯಂತಿಯ (2922nd birth anniversary of Lord Sri Mahavira) ಅಂಗವಾಗಿ ತ್ರಿಭುವನ ತಿಲಕ ಚೂಡಾಮಣಿ ಸಾವಿರ ಕಂಬದ ಬಸದಿಯಲ್ಲಿ ಏಪ್ರಿಲ್ 5ರಂದು ಕಿರಿಯ ರಥೋತ್ಸವ ಮತ್ತು ಏಪ್ರಿಲ್ 6ರಂದು ಹಿರಿಯ ರಥೋತ್ಸವ ನಡೆಯಲಿದೆ ಎಂದು ಜೈನಮಠದ ಭಟ್ಟಾರಕ ಚಾರಕೀರ್ತಿ ಸ್ವಾಮೀಜಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇದನ್ನ ಓದಿ: ಮಿಜಾರಿನಲ್ಲಿ ಅಪಘಾತ; ಯುವಕ ಪವಾಡ ಸದೃಶ ಪಾರು
ಅಂದು ರಾತ್ರಿ 7 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ (MLA Umanatha Kotyan), ಮಾಲ್ದಬೆಟ್ಟು ಜಯಪ್ರಕಾಶ್ ಪಡಿವಾಳ್, ಹಿರಿಯ ವಕೀಲ ಬಾಹುಬಲಿ ಪ್ರಸಾದ್, ಟೆಕ್ಸ್ಟೈಲ್ಸ್ ಉದ್ಯಮಿ ರಾಜೇಂದ್ರ ಜೈನ್, ಕೆ.ಪಿ ಜಗದೀಶ್ ಅಧಿಕಾರಿ ಭಾಗವಹಿಸುವರು. 6ರಂದು ರಾತ್ರಿ 7ಕ್ಕೆ ನಡೆಯುವ ಹಿರಿಯ ರಥೋತ್ಸವ ಪ್ರಯುಕ್ತ ಧಾರ್ಮಿಕ ಸಭೆಯನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ಉದ್ಘಾಟಿಸುವರು. ಶಿಮುಂಜೆಗುತ್ತು ಸಂಪತ್ ಸಾಮ್ರಾಜ್ಯ ಶ್ರವಣ ಜ್ಯೋತಿ ಬೆಳಗಿಸುವರು. ಉದ್ಯಮಿ ಶೈಲೇಂದ್ರ ಕುಮಾರ್, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ (Excellent educational institution) ಅಧ್ಯಕ್ಷ ಯುವರಾಜ್ ಜೈನ್, ಡಾ.ಮಹಾವೀರ ಜೈನ್ ಭಾಗವಹಿಸುವರು. ಪ್ರತಿ ದಿನ ಸಾಯಂಕಾಲ ಭಜನಾ ಸಂಕೀರ್ತನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಬಸದಿಗಳ ಮೊಕ್ತೇಸರರಾದ ಪಟ್ನಶೆಟ್ಟಿ ಸುಧೇಶ್ ಕುಮಾರ್, ದಿನೇಶ್ ಕುಮಾರ್ ಆನಡ್ಕ ಸುದ್ದೊಗೋಷ್ಠಿಯಲ್ಲಿದ್ದರು.