ಮೂಡುಬಿದಿರೆ: ಡಾ.ನರೇಂದ್ರ ರೈ ದೇರ್ಲ ಬರೆದ `ಎಲ್.ಸಿ ಸೋನ್ಸ್ ಸೃಷ್ಟಿ ಫಲಪ್ರಪಂಚ ಸೋನ್ಸ್ ಫಾರ್ಮ್’ ಕೃತಿ ಬಿಡುಗಡೆ ಹಾಗೂ ಶ್ರದ್ಧಾಂಜಲಿ ಸಭೆಯು ಡಾ.ಎಲ್.ಸಿ ಸೋನ್ಸ್ ಅಭಿಮಾನಿ ಬಳಗದ (Dr LC Sons fan club) ಆಶ್ರಯದಲ್ಲಿ ಏ.16ರಂದು ಸ್ಕೌಟ್ಸ್ ಗೈಡ್ಸ್ ಕನ್ನಡಭವನದಲ್ಲಿ ಸಾಯಂಕಾಲ 4.30ಕ್ಕೆ ನಡೆಯಲಿದೆ.
ಇದನ್ನ ಓದಿ: ವಿಶ್ವ ವಿದ್ಯಾನಿಲಯ ಕಾಲೇಜಿನಲ್ಲಿ ವಿಶ್ವ ಆರೋಗ್ಯ ದಿನಾಚರಣೆ
ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ (Swastishree Bhattarak Charukeerthi Panditacharya Swamiji) ಕೃತಿ ಬಿಡುಗಡೆಗೊಳಿಸಲಿರುವರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ (Dr. M Mohan Alva) ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ.ಪುಂಡಿಕಾ ಗಣಪಯ್ಯ ಭಟ್ (Dr. Pundika Ganapayya Bhatt) ನುಡಿನಮನ ಸಲ್ಲಿಸಲಿದ್ದಾರೆ. ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಕೃತಿ ಪರಿಚಯ ಮಾಡಲಿರುವರು ಎಂದು ಪ್ರಕಟಣೆ ತಿಳಿಸಿದೆ.