ಮೂಡುಬಿದಿರೆ: ಸ್ವತಂತ್ರ ಭಾರತ ತನ್ನ ದೇಶದ ಅಸ್ಮಿತೆಯನ್ನು ಪ್ರತಿಷ್ಠಾಪಿಸಿದ ಮಹತ್ವದ ದಿನವಾದ ಗಣತಂತ್ರ ದಿವಸದಂದು (Ganatantra Divas)ದೇಶದ ಹಿನ್ನೆಲೆ ಮುನ್ನೆಲೆಗಳನ್ನು ಪರಿಲೋಕಿಸುವುದು ಸ್ವತಂತ್ರ ಪ್ರಜೆಯ ಆದ್ಯ ಕರ್ತವ್ಯ. ಸಾವಿರಾರು ವರ್ಷಗಳ ಪರಕೀಯರ ಆಕ್ರಮಣದ ವಿರುದ್ಧ ಸೆಣಸಾಡಿ ಸ್ವಾಭಿಮಾನದ ಬದುಕಿಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ಮಹೋನ್ನತ ನಾಯಕರ ಸಾಹಸಗಾಥೆ ನಮ್ಮೆಲ್ಲರಿಗೂ ದೇಶಾಭಿಮಾನಕ್ಕೆ ಪ್ರೇರಣೆಯಾಗಿದೆ. ದೇಶದ ಸಂವಿಧಾನದ ಆಶಯಗಳಿಗನುಸಾರವಾಗಿ ಭಾರತ ಮಾತೆಯ ಸೇವೆಗಾಗಿ ಕಟಿಬದ್ಧರಾಗೋಣ ಎಂದು ವಕೀಲ ಸುವ್ರತ್ ಕುಮಾರ್(advocate Suvrat Kumar) ಹೇಳಿದರು.
ಮೂಡುಬಿದಿರೆ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ(excellent educational institutions)ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ (republic Day program)ಧ್ವಜಾರೋಹಣಗೈದು ಸಂದೇಶ ನೀಡಿದರು.
ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆ ವಹಿಸಿದರು. ಹಲವು ವಿಧವಾದ ಜೀವ ಸ0ಕುಲಗಳಿಂದ ತುಂಬಿರುವ ಸಂಪದ್ಭರಿತವಾದ ದೇಶದಲ್ಲಿ ಶ್ರೇಷ್ಠ ಮಾನವ ಜನ್ಮ ಪಡೆದ ನಾವು ದೇಶದ ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರ ವಹಿಸಬೇಕಾಗಿದೆ. ದೇಶಕ್ಕಾಗಿ ಸೇವೆ ಸಲ್ಲಿಸಿದ ಸಾಧಕರ, ವೀರ ಯೋಧರ ಬಿಂಬ ನಮ್ಮ ಕಣ್ಣೆದುರು ನಿಲ್ಲಬೇಕಾಗಿದೆ. ಅತ್ಯಂತ ವೇಗವಾಗಿ ಅಭಿವೃದ್ಧಿಯನ್ನು ಹೊಂದುತ್ತಿರುವ ರಾಷ್ಟ್ರಕ್ಕೆ ಅಷ್ಟೇ ತ್ವರಿತಗತಿಯಲ್ಲಿ ನಾವು ಪ್ರತಿಸ್ಪಂದಿಸಬೇಕಾಗಿದೆ ಎಂದರು. ಎನ್‌ಸಿಸಿ(NCC), ರೋವರ್ಸ್ ಮತ್ತು ರೋವರ್ಸ್ ರೆಂಜರ್ಸ್(rovers and rangers), ಸ್ಕೌಟ್ಸ್ ಮತ್ತು ಗೈಡ್ಸ್ (scout and guides)ಮತ್ತು ಎನ್‌ಎಸ್‌ಎಸ್(national service scheme) ಘಟಕಗಳು ಪಥಸಂಚಲನದ ಮೂಲಕ ಗಣ್ಯ ಅತಿಥಿಗಳಿಗೆ ಗೌರವಾರ್ಪಣೆ ಸಲ್ಲಿಸಿದರು.
ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಪ್ರಾ0ಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ರೋವರ್ಸ್ ಅಧಿಕಾರಿ ಪ್ರದೀಪ್, ಸ್ಕೌಟ್ಸ್ ಅಧಿಕಾರಿ ಭಾಸ್ಕರ್ ನೆಲ್ಯಾಡಿ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ ಜೈನ್ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಶಿವಪ್ರಸಾದ ಭಟ್ ವ0ದಿಸಿದರು. ಶಿಕ್ಷಕ ಜಯಶೀಲ ಕಾರ್ಯಕ್ರಮ ನಿರೂಪಿಸಿದರು.