ಮೂಡುಬಿದಿರೆ: ತಾಲೂಕು ರಾಷ್ಟ್ರೀಯ ಹಬ್ಬಗಳ(Thaluk Administration Soudha) ಆಚರಣಾ ಸಮಿತಿ ಮೂಡುಬಿದಿರೆ ವತಿಯಿಂದ ತಾಲೂಕು ಆಡಳಿತ ಸೌಧದಲ್ಲಿ 74ನೇ ಗಣರಾಜ್ಯೋತ್ಸವವನ್ನು(74th Republic Day Celebration) ಆಚರಿಸಲಾಯಿತು.
ತಹಸೀಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕುಚನೂರು ಧ್ವಜವನ್ನು ಅರಳಿಸಿದರು. ಸಮಾನತೆ, ಸ್ವಾತಂತ್ರ‍್ಯವನ್ನು ನಮ್ಮ ಸಂವಿಧಾನವು ಕೊಟ್ಟಿದೆ. ಪ್ರತಿಯೊಬ್ಬ ನಾಗರಿಕನಿಗೆ ಮೂಲಭೂತ ಹಕ್ಕು ಮತ್ತು ಸೌಕರ್ಯಗಳನ್ನು ನೀಡಲು ಸರ್ಕಾರವು ನಿರ್ದೇಶನ ನೀಡುತ್ತಿದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು ಎಂದರು.
ಶಾಸಕ ಉಮಾನಾಥ್ ಎ.ಕೋಟ್ಯಾನ್ ಅಧ್ಯಕ್ಷತೆಯನ್ನು ವಹಿಸಿ ಪಥಸಂಚಲನದ ಗೌರವ ರಕ್ಷೆಯನ್ನು ಸ್ವೀಕರಿಸಿದರು. 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿರುವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾದ ಸೌಮ್ಯ ಮೂಡುಮಾರ್ನಾಡು(Moodanard), ಫ್ಲೆವೀನಾ ದರೆಗುಡ್ಡೆ ಹಾಗೂ ಪ್ರತೀಕ್ಷಾ (ಮೂಡುಮಾರ್ನಾಡು) ಇವರಿಗೆ ಲ್ಯಾಪ್ ಟ್ಯಾಪ್ ಮತ್ತು ಬ್ಯಾಗನ್ನು ನೀಡಲಾಯಿತು. ಗ್ರಾಮ ವನ್‌ನಲ್ಲಿ ಅತ್ಯುತ್ತಮ ಸೇವೆ ನೀಡುತ್ತಿರುವ ಶಿರ್ತಾಡಿಯ ಸುಕೇಶ್ ಶೆಟ್ಟಿ, ಬೆಳುವಾಯಿಯ ಸಂಜಿತ್ ಹಾಗೂ ಪಡುಮಾರ್ನಾಡಿನ ಚೈತ್ರಾ ಅವರನ್ನು ಗೌರವಿಸಲಾಯಿತು.
ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷೆ ಸುಜಾತ ಶಶಿಕಿರಣ್, ಸದಸ್ಯರು, ಮೂಡಾದ ಮಾಜಿ ಅಧ್ಯಕ್ಷ ಮೇಘನಾಥ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ, ಉಪತಹಸೀಲ್ದಾರ್ ರಾಮ್.ಕೆ, ಕಂದಾಯ ನಿರೀಕ್ಷಕ ಮಂಜುನಾಥ್, ಅಬಕಾರಿ ಇಲಾಖೆಯ ಸುಬ್ರಹ್ಮಣ್ಯ, ಪೊಲೀಸ್ ನಿರೀಕ್ಷಕ ನಿರಂಜನ್ ಕುಮಾರ್ ಅತಿಥಿಗಳಾಗಿ ಭಾಗವಹಿಸಿದ್ದರು.
ಪುರಸಭಾ(Purasabha) ಮುಖ್ಯಾಧಿಕಾರಿ ಇಂದು ಎಂ. ಸ್ವಾಗತಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಪೊಲೀಸ್ ಇಲಾಖೆ, ಗೃಹರಕ್ಷಕದಳ, ವಿವಿಧ ಶಾಲೆಯ ವಿದ್ಯಾರ್ಥಿಗಳು ಮೂಡುಬಿದಿರೆ ಪೇಟೆಯಲ್ಲಿ ಪೆರೇಡ್ ನಡೆಸಿದರು.https://moodabidri.newskannada.com/politics/janaspandana-programme-in-moodbidri