ಮೂಡುಬಿದಿರೆ: ಗಣೇಶ್ ಎಂಟರ್ ಪ್ರೈಸಸ್ ನ ಆಡಳಿತ ಪಾಲುದಾರ ಎಂ ಗೋಪಾಲಕೃಷ್ಣ ಮಲ್ಯ (71 )ಅವರು ಭಾನುವಾರ ನಿಧನರಾದರು. ಅವರು ತಾಯಿ, ಪತ್ನಿ, ಪುತ್ರ , ಪುತ್ರಿಯನ್ನು ಅಗಲಿದ್ದಾರೆ.
ಮೂಡುಬಿದಿರೆಯ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಮೊಕ್ತೇಸರರಾಗಿ ಈ ಹಿಂದೆ ಎರಡು ಅವಧಿಗೆ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಮೂಡುಬಿದಿರೆಯಲ್ಲಿ ಸನಾತನ ಸಂಸ್ಥೆಯ ಪ್ರಮುಖರಲ್ಲಿ ಒಬ್ಬರಾಗಿ ಧರ್ಮ ಶಿಕ್ಷಣ ಪ್ರಸಾರ ಕಾರ್ಯದಲ್ಲಿ ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.