ಮೂಡುಬಿದಿರೆ: ಯುವ ಜನಾಂಗ ನಮ್ಮ ಸಂಸ್ಕೃತಿಯಿಂದ ದೂರವಾಗುತ್ತಿದ್ದಾರೆ. ಮಕ್ಕಳ ಕೈಗೆ ಮೊಬೈಲ್( Mobile) ಕೊಟ್ಟು ನಮ್ಮ ಸಂಸ್ಕೃತಿಯನ್ನು ನಾಶ ಮಾಡುತ್ತಿದ್ದೇವೆ. ಏನಾದರೂ ಇಂದು ತುಳುನಾಡ ಸಂಸ್ಕೃತಿ (Culture of Tulunada) ಉಳಿದಿದೆಯೆಂದಾದರೆ ಅದು ಹಳ್ಳಿಯ ಮಹಿಳೆಯರಿಂದ. ಯುವ ಜನಾಂಗವು ಪಾಶ್ಚಾತ್ಯ ಸಂಸ್ಕೃತಿಗೆ (Western culture) ಶರಣಾಗದೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಕೇಮಾರು ಈಶ ವಿಠಲದಾಸ ಸ್ವಾಮೀಜಿ (Kemaru Isha Vithaladasa Swamiji) ನುಡಿದರು.
ಶಿರ್ತಾಡಿಯ ಕರಾವಳಿ ಫ್ರೆಂಡ್ಸ್ನ (Coastal Friends of Shirtadi) ದಶಮಾನೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಇದನ್ನ ಓದಿ: ದ.ಕ. ಜಿಲ್ಲಾ ಸಮತಿಯ ವತಿಯಿಂದ ಮೂಡುಬಿದಿರೆಯಲ್ಲಿ ದಲಿತ ಸಮಾವೇಶ
ಶಿರ್ತಾಡಿ ಗ್ರಾಪಂ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಅತಿಥಿಗಳಾಗಿ ಭಾಗವಹಿಸಿದ್ದರು.
ಕಂಬಳ ಕ್ಷೇತ್ರದ (Kambala)ಸಾಧಕರಾದ ಲೂವಿಸ್ ಸಲ್ದಾನ್ಹ, ಶ್ರೀಕಾಂತ್ ಬೋರುಗುಡ್ಡೆ, ಪತ್ರಕರ್ತ ಅಶ್ರಫ್ ವಾಲ್ಪಾಡಿ, ಯಕ್ಷಗಾನ ಕ್ಷೇತ್ರದ ಕುಮಾರಿ ಪೂಜಾ ಶಿರ್ತಾಡಿ, ಉದ್ಯಮ ಕ್ಷೇತ್ರದಲ್ಲಿ ಅಮ್ಮ ಸೌಂಡ್ಸ್ ನ ರಂಜಿತ್, ನಾಟಕ ರಂಗದ ಗಣೇಶ್ ಅಳಿಯೂರು ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಶ್ರೀಧರ ಪೂಜಾರಿ ಶಿರ್ತಾಡಿ ಮತ್ತು ಸುರೇಶ್ ಪೂಜಾರಿ, ಮಂಗಿಲ ಅವರನ್ನು ಸನ್ಮಾನಿಸಲಾಯಿತು. ಕರವಾಳಿ ಫ್ರೆಂಡ್ಸ್ ಸಂಚಾಲಕ ಸಂದೀಪ್ ಸಾಲ್ಯಾನ್ ಅವರನ್ನು ಫ್ರೆಂಡ್ಸ್ ಸರ್ಕಲ್ ವತಿಯಿಂದ ಸನ್ಮಾನಿಸಲಾಯಿತು.
ಕರಾವಳಿ ಫ್ರೆಂಡ್ಸ್ ಸ್ಥಾಪಕ ಸಂದೀಪ್ ಸಾಲ್ಯಾನ್ (Sandeep Salyan founder of Coastal Friends) ಸಮಿತಿಯ ಅಧ್ಯಕ್ಷ ವಿಜಯ ಸಾಲ್ಯಾನ್, ಕಾರ್ಯದರ್ಶಿ ಗೋಪಾಲ ಗುಂಡಡಪ್ಪು, ಉಪಾಧ್ಯಕ್ಷ ಸತೀಶ್ ಕೆ.ಸಿ, ಜತೆ ಕಾರ್ಯದರ್ಶಿ ಪ್ರಶಾಂತ್ ವಾಲ್ಪಾಡಿ, ಕೋಶಾಧಿಕಾರಿ ಲೋಹಿತ್ ಸನಿಲ್, ಸದಸ್ಯರಾದ ಗಣೇಶ್ ಬೋರುಗುಡ್ಡೆ, ನಿತೀಶ್ ಕೊಣಾಜೆ, ರಾಜೇಶ್ ಮಾಂಟ್ರಾಡಿ,ಸತೀಶ್ ದಡ್ಡಲ್ಪಲ್ಕೆ, ಸುಧಾಕರ ದರೆಗುಡ್ಡೆ, ನಿವೇಶ್ ಕೊಣಾಜೆ, ಸುಚೇಂದ್ರ ಕೊಣಾಜೆ, ನಾಗೇಶ್ ಬೋರುಗುಡ್ಡೆ,ರೋಹಿತ್ ಪಚ್ಚನಾಡಿ, ವಿವೇಕ್ ವಾಲ್ಪಾಡಿ, ರಂಜಿತ್ ಸಾವ್ಯ,ಅಶೋಕ್ ಕಜೆ, ಪ್ರಸಾದ್ ಬೋರುಗುಡ್ಡೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿರಿಯಡ್ಕ ಮೇಳದವರಿಂದ ಕಟ್ಟೆದ ಗುರ್ಕಾರೆ ಯಕ್ಷಗಾನ ಪ್ರದರ್ಶನ ನಡೆಯಿತು.