ಮೂಡುಬಿದಿರೆ: ಚೆನೈನ (Chennai)ದೈಹಿಕ ಶಿಕ್ಷಣ ಮತ್ತು ಕ್ರೀಡಾ( physical education and sports) ವಿಶ್ವವಿದ್ಯಾನಿಲಯದಲ್ಲಿ ಜರುಗಿದ ನೈರುತ್ಯ ವಲಯದ ಅಂತರ್ ವಿಶ್ವವಿದ್ಯಾನಿಲಯದ(South West Inter-University Athletics Manglore Champions) ಪುರುಷರ ಮತ್ತು ಮಹಿಳೆಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು 186 ಅಂಕಗಳೊಂದಿಗೆ ಎರಡು ವಿಭಾಗದಲ್ಲಿ ಚೊಚ್ಚಲ ಚಾಂಪಿಯನ್( champion) ಆಗಿ ಹೊರಹೊಮ್ಮಿತು.
ಮಂಗಳೂರು ವಿಶ್ವವಿದ್ಯಾಲಯ( Mangalore University) ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ 9 ಚಿನ್ನ(Gold), 8 ಬೆಳ್ಳಿ(Silver), 6 ಕಂಚಿನ ಪದಕಗಳೊಂದಿಗೆ ಒಟ್ಟು 23 ಪದಕಗಳೊಂದಿಗೆ ಅಗ್ರಸ್ಥಾನಿಯಾಯಿತು. ಪುರುಷರ ವಿಭಾಗದಲ್ಲಿ 6 ಚಿನ್ನ, 4 ಬೆಳ್ಳಿ, 3 ಕಂಚಿನ ಪದಕಗಳನ್ನು ಸಂಪಾದಿಸುವ ಮೂಲಕ 90 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡರೆ, ಮಹಿಳಾ ವಿಭಾಗದಲ್ಲಿ 3 ಚಿನ್ನ, 4 ಬೆಳ್ಳಿ, 3 ಕಂಚುಗಳೊಂದಿಗೆ 96 ಅಂಕಗಳನ್ನು ಗಳಿಸಿ ಪಾರಮ್ಯವನ್ನು ಮೆರೆಯಿತು.
ಆಳ್ವಾಸ್ ಕ್ರೀಡಾಪಟುಗಳ ಸಾಧನೆ
ಮಂಗಳೂರು ವಿವಿ ಸಂಪಾದಿಸಿದ 9 ಚಿನ್ನದ ಪದಕಗಳಲ್ಲಿ 08 ಚಿನ್ನದ ಪದಕ ಆಳ್ವಾಸ್(Alvas)ಕ್ರೀಡಾಪಟುಗಳು ಪಡೆದಿದ್ದಾರೆ. ಹರೀಶ್ 10,000ಮೀಟರ್ ಹಾಗೂ 5,000ಮೀಟರ್ ಓಟದಲ್ಲಿ ಪ್ರಥಮ, ಹರ್ದೀಪ್ 20ಕಿಲೋಮೀಟರ್ ನಡಿಗೆಯಲ್ಲಿ ಪ್ರಥಮ, ಉಪೇಂದ್ರ ಬಲಿಯನ್ ಹಾಫ್ ಮ್ಯಾರಥಾನ್‌ಲ್ಲಿ ಪ್ರಥಮ, ರಿತೇಶ್ 1500ಮೀಟರ್ ಓಟದಲ್ಲಿ ಪ್ರಥಮ, ಸ್ನೇಹ ಎಸ್ ಎಸ್ 100 ಮೀಟರ್ ಓಟದಲ್ಲಿ ಪ್ರಥಮ, ಕೆವಿನ್ ಅಶ್ವಿನಿ ಹೈ ಜಂಪ್‌ನಲ್ಲಿ ಪ್ರಥಮ, 4*100 ರಿಲೇಯಲ್ಲಿ ಸ್ನೇಹಾ, ನವಮಿ, ವರ್ಷಾ ಹಾಗೂ ಕೀರ್ತನಾ ತಂಡ ಪ್ರಥಮ, ಅಖಿಲೇಶ್ ಟ್ರಿಪಲ್ ಜಂಪ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಮಂಗಳೂರು ವಿವಿ ಸಂಪಾದಿಸಿದ 8 ಬೆಳ್ಳಿ ಪದಕಗಳನ್ನು ಆಳ್ವಾಸ್ ಕ್ರೀಡಾಪಟುಗಳ ಪಡೆದಿದ್ದಾರೆ.
ಸಚಿನ್ ಯಾದವ್ ಜವೆಲಿನ್ ಥ್ರೋ( javelin throw), ಅರ್ಮೊಲ್ ಹೈ ಜಂಪ್( high jump), ಸ್ಟಾö್ಯಲಿನ್ ಡೆಕಾಥ್ಲಾನ್, ನಿತಿನ್ ಮಲಿಕ್ ಹ್ಯಾಮರ್ ಥ್ರೋ( hammer throw ), ಪೂನಂ 5000 ಮೀಟರ್ ಓಟ, ಅಂಜಲಿ 100 ಮೀಟರ್ ಹರ್ಡಲ್ಸ್( hurdles ), ಶೃತಿಲಕ್ಷ್ಮಿ ಲಾಂಗ್ ಜಂಪ್( long jump), ಸ್ನೇಹಲತಾ ಯಾದವ್ 1500 ಮೀಟರ್ ಓಟದಲ್ಲಿ ದ್ವೀತಿಯ ಸ್ಥಾನಿಯಾಗಿದ್ದಾರೆ.
ಮಂಗಳೂರು ವಿವಿ ಸಂಪಾದಿಸಿದ 6 ಕಂಚಿನ ಪದಕಗಳಲ್ಲಿ 05 ಪದಕಗಳು ಆಳ್ವಾಸ್ ಕ್ರೀಡಾಪಟುಗಳ ಕೊಡುಗೆ
ಆಶಿಶ್ ಕುಮಾರ್ ಶಾಟ್‌ಪುಟ್, ಉಜ್ವಲ್ ಡಿಸ್ಕ್ಸ್ ಥ್ರೋ( discus throw ), ನವೀನ್ ಎಸ್ ಪಾಟೀಲ್ ಹಾಫ್ ಮ್ಯಾರಥಾನ್( half marathon), ಸ್ನೇಹಾ ಎಸ್ ಎಸ್ 200 ಮೀಟರ್ ಓಟ, ಅರ್ಪಿತ 800 ಮೀಟರ್ ಓಟ, ಪೂನಂ 10,000 ಮೀಟರ್ ಓಟ
ಸಾಧಕ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ(Mohan Alva)ಅಭಿನಂದಿಸಿದ್ದಾರೆ.