ಮೂಡುಬಿದಿರೆ: ಹಳೆಯ ಮತ್ತು ಇಂದಿನ ತಲೆಮಾರುಗಳ ಆಲೋಚನೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಹಳೆ ತಲೆಮಾರಿನವರು ಜೀವನವನ್ನು ಜವಾಬ್ದಾರಿ ಹಾಗೂ ಕೃತಜ್ಞತೆಯಿಂದ ಕಂಡರೆ, ಹೊಸ ತಲೆಮಾರಿನವರು ಬದುಕನ್ನು ಹಕ್ಕು ಎಂದು ಭಾವಿಸಿದ್ದಾರೆ. ಬದುಕು ಕೃತಜ್ಞತೆಯೇ ಹೊರತು ಹಕ್ಕಲ್ಲ. ರಾಷ್ಟ್ರೀಯತೆ ಜೊತೆ ಸಾಮಾಜಿಕ ಪ್ರಜ್ಞೆಯಿದ್ದರೆ ದೇಶವನ್ನು ಅದ್ಭುತವಾಗಿ ಕಟ್ಟಬಹುದು ಎಂದು ಸಾಹಿತಿ, ನಿರ್ದೇಶಕ ಎಸ್.ಎನ್ ಸೇತುರಾಮ್ (Written by, directed by SN Sethuram) ಹೇಳಿದರು.
ಇದನ್ನ ಓದಿ: ದ್ವಿತೀಯ ಪಿ.ಯು.ಸಿ. ಫಲಿತಾಂಶ; ಆಳ್ವಾಸ್‌ನ ಅನನ್ಯ ಕೆ.ಎ, ಕೆ.ದಿಶಾ ಪಿ.ಯು ಮೇಲುಗೈ
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ (Alwas Engineering College) ಚಿಂತನ- ಮಂಥನ ರೀಡರ್ಸ್ ಕ್ಲಬ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರೀಯತೆ ಮತ್ತು ಸಾಮಾಜಿಕ ಪ್ರಜ್ಞೆ ವಿಷಯದ ಕುರಿತು ಉಪನ್ಯಾಸ ನೀಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ (Trustee Vivek Alva) ಮಾತನಾಡಿ, ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫರ್ನಾಂಡಿಸ್, ಚಿಂತನ- ಮಂಥನ ರೀಡರ್ಸ್ ಕ್ಲಬ್‌ನ (Chintana- Manthan Readers Club) ಸಂಯೋಜಕ ಶಶಿಕುಮಾರ್, ಶ್ವೇತಾ ಉಪಸ್ಥಿತರಿದ್ದರು. ಉಪನ್ಯಾಸಕ ಮನೋಜ್ ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರಿಯ ವಂದಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.