ಮೂಡುಬಿದಿರೆ: ಬದುಕಿನಲ್ಲಿ ಸಮಯದ ಅರಿವಿರಬೇಕಾದ್ದು ಅತ್ಯಗತ್ಯ. ವಿಳಂಬ ಪೃವತಿ ರೂಢಿಸಿಕೊಳ್ಳದೆ ಸಮಪಾಲನೆಯಿಂದ ಕಾರ್ಯಪ್ರವರ್ತರಾದರೆ ಯಶಸ್ಸು ಸಾಧ್ಯ ಎಂದು ದಿ ಹಿಂದೂ ಗ್ರೂಪ್ ಮಾರಾಟ, ವಿತರಣಾ ಉಪಾಧ್ಯಕ್ಷ ಶ್ರೀಧರ ಅರನಾಳ (Distribution Vice President Sridhara Aranala) ಹೇಳಿದರು.
ಇದನ್ನ ಓದಿ: ರಾಷ್ಟ್ರೀಯತೆ-ಸಾಮಾಜಿಕ ಪ್ರಜ್ಞೆ: ಆಳ್ವಾಸ್‌ನಲ್ಲಿ ವಿಶೇಷ ಉಪನ್ಯಾಸ
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ (Alwas Engineering College) ಎಂಬಿಎ ವಿಭಾಗದ ವತಿಯಿಂದ ಮಂಗಳವಾರ ಕುವೆಂಪು ಸಭಾಂಗಣದಲ್ಲಿ (Kuvempu hall) ಆಯೋಜಿಸಿದ್ದ ವಿಶೇಷ ಅತಿಥಿ ಉಪನ್ಯಾಸದಲ್ಲಿ ಒತ್ತಡ ಹಾಗೂ ಭಾವನೆಗಳ ನಿರ್ವಹಣೆಯ ತಂತ್ರಗಳು’ ವಿಷಯದ ಕುರಿತು ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ (Trustee Vivek Alva) ಅಧ್ಯಕ್ಷತೆವಹಿಸಿದರು. ಓದು ಬದುಕಿನ ಬಹು ಮುಖ್ಯ ಭಾಗ. ದಿನನಿತ್ಯದ ಜೀವನದಲ್ಲಿ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು. ದಿ ಹಿಂದೂ ಗ್ರೂಪ್‌ನ (The Hindu Group) ಪ್ರದಾನ ವ್ಯವಸ್ಥಾಪಕ ಬಾಬು ವಿಜಯನ್ ಉಪಸ್ಥಿತರಿದ್ದರು. ಎಂಬಿಎ ವಿಭಾಗದ ಸಂಯೋಜಕಿ ಪ್ರಿಯಾ ಸಿಕ್ವೇರಾ (Priya Sequeira) ಸ್ವಾಗತಿಸಿದರು. ಎಂಬಿಎ ಪ್ರಥಮ ವರ್ಷದ ವಿದ್ಯಾರ್ಥಿನಿ ಸಿಯೋನಾ ವಂದಿಸಿದರು. ವಿದ್ಯಾರ್ಥಿ ಶ್ರವಣ್ ಆಚಾರ್ಯ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಪ್ರಣವ ಸ್ವರೂಪ ಕಾರ್ಯಕ್ರಮ ನಿರೂಪಿಸಿದರು.