ಮೂಡುಬಿದಿರೆ: ರೋಟರಿ ಎಜುಕೇಶನ್ ಸೊಸೈಟಿ (Rotary Education Society) ಇದರ ಆಡಳಿತಕ್ಕೊಳಪಟ್ಟ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯು (Rotary English Medium High School) ಅತ್ಯುತ್ತಮ ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ 138 ವಿದ್ಯಾರ್ಥಿಗಳಲ್ಲಿ 135 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 53 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 75 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುವುದು ಸಂಸ್ಥೆಗೆ ಹೆಮ್ಮೆ ತಂದಿರುತ್ತದೆ.
ಸಮೀಕ್ಷಾ ಎಸ್. 620 (ಶೇ.99.20) ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ 6ನೇ ಸ್ಥಾನ (6th position in state level) ಪಡೆದಿದ್ದಾರೆ.
ಅಮೃತೇಶ್ ವಿ. ಅತ್ರಿ 619(ಶೇ.99.04) ಹಾಗೂ ಕೆ.ಸುಮಾ ಪೈ 618 (ಶೇ.98.88) ಅಂಕಗಳನ್ನು ಪಡೆಯುವುದರೊಂದಿಗೆ ರಾಜ್ಯ ಮಟ್ಟದಲ್ಲಿ (At the state level) ಕ್ರಮವಾಗಿ 7 ಮತ್ತು 8ನೇ ರ‍್ಯಾಂಕನ್ನು ಪಡೆದಿದ್ದಾರೆ.
ಇದನ್ನ ಓದಿ: 27 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಮಂಜೂರಾತಿ ಪತ್ರ ವಿತರಣೆ
ಒಟ್ಟು 11 ಮಂದಿ ವಿದ್ಯಾರ್ಥಿಗಳು 600 ಅಂಕಗಳಿAದ ಮೇಲ್ಪಟ್ಟ ಅಂಕಗಳನ್ನು ಪಡೆದಿರುವುದು ಸಂಸ್ಥೆಗೆ ಕೀರ್ತಿ ತಂದಿದೆ. ಈ ಪೈಕಿ ಭಾಷಾ ವಿಷಯಗಳಲ್ಲಿ ಒಟ್ಟು 29 ವಿದ್ಯಾರ್ಥಿಗಳು, ಗಣಿತದಲ್ಲಿ (in mathematics), ವಿಜ್ಞಾನದಲ್ಲಿ ಹಾಗೂ ಸಮಾಜ ವಿಜ್ಞಾನದಲ್ಲಿ ತಲಾ ಒಬ್ಬರು ವಿದ್ಯಾರ್ಥಿಗಳು ವಿಷಯವಾರು ಪೂರ್ತಿ ಅಂಕಗಳನ್ನು ಪಡೆದಿದ್ದಾರೆ.