ಮೂಡುಬಿದಿರೆ: ಎಸ್‌ಎಸ್‌ಎಲ್‌ಸಿಯಲ್ಲಿ (SSLC) ಆಳ್ವಾಸ್ ಶಾಲೆಯ ಆರು ಮಂದಿ ವಿದ್ಯಾರ್ಥಿಗಳು 620ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ (At the press conference) ತಿಳಿಸಿದರು. ಪ್ರಣಾಮ್ ಶೆಟ್ಟಿ (623), ಸ್ಪಂದನಾ ಎಂ. ಎಂ.(622), ಸಂಜನಾ ಎಸ್. ಎಚ್. (621), ಶಾರದಾ ಎಸ್.ಕೆ. (621), ವರ್ಷಾ ಬಿ.ಎಚ್. (620), ಮಂಜುಳಾ ಎಸ್.ಜೆ. (620) ಅಂಕ ಪಡೆದಿದ್ದಾರೆ. 64 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. 102 ವಿದ್ಯಾರ್ಥಿಗಳು ಶೇ95ಕ್ಕೂ ಅಧಿಕ, 176 ವಿದ್ಯಾರ್ಥಿಗಳು ಶೇ90ಕ್ಕೂ ಅಧಿಕ, 294 ವಿದ್ಯಾರ್ಥಿಗಳು ಶೇ 80ಕ್ಕೂ ಅಧಿಕ ಅಂಕ ಪಡೆದಿದ್ದಾರೆ.
ಒಬ್ಬ ವಿದ್ಯಾರ್ಥಿ ಐದು ವಿಷಯಗಳಲ್ಲಿ ಶೇ.100 ಪಡೆದಿದ್ದು, 4 ವಿದ್ಯಾರ್ಥಿಗಳು ನಾಲ್ಕು ವಿಷಯಗಳಲ್ಲಿ ಶೇ.100 ಅಂಕ ಪಡೆದಿದ್ದಾರೆ. 5 ವಿದ್ಯಾರ್ಥಿಗಳು ಮೂರು ವಿಷಯಗಳಲ್ಲಿ, 12 ವಿದ್ಯಾರ್ಥಿಗಳು 2 ವಿಷಯಗಳಲ್ಲಿ ಹಾಗೂ 57 ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ಶೇ 100 ಅಂಕ ಪಡೆದಿದ್ದಾರೆ.
ಪ್ರಥಮ ಭಾಷೆ ಕನ್ನಡದಲ್ಲಿ 32, ದ್ವಿತೀಯ ಭಾಷೆ ಕನ್ನಡದಲ್ಲಿ 20, ತೃತೀಯ ಭಾಷೆ ಕನ್ನಡದಲ್ಲಿ 17, ಪ್ರಥಮ ಭಾಷೆ ಇಂಗ್ಲಿಷ್‌ನಲ್ಲಿ 2, ದ್ವಿತೀಯ ಭಾಷೆ ಇಂಗ್ಲಿಷ್ 5 (Second Language English 5), ಪ್ರಥಮ ಭಾಷೆ ಸಂಸ್ಕೃತ 15, ತೃತೀಯ ಭಾಷೆ ಹಿಂದಿಯಲ್ಲಿ 10, ತೃತೀಯ ಭಾಷೆ ಸಂಸ್ಕೃತದಲ್ಲಿ 7, ಗಣಿತದಲ್ಲಿ 4, ವಿಜ್ಞಾನ 8, ಸಮಾಜ ವಿಜ್ಞಾನದಲ್ಲಿ 7 ವಿದ್ಯಾರ್ಥಿಗಳು ಶೇ 100 ಅಂಕ ಪಡೆದಿದ್ದಾರೆ. ಒಟ್ಟಾರೆ ಫಲಿತಾಂಶದಲ್ಲಿ ವಿವಿಧ ವಿಷಯಗಳ ಒಟ್ಟು 127 ಪತ್ರಿಕೆಗಳಲ್ಲಿ ಶೇ.100 ಅಂಕಗಳು ಬಂದಿವೆ ಎಂದು ತಿಳಿಸಿದರು.
ಇದನ್ನ ಓದಿ: ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಕ್ರೀಡಾಕೂಟದಲ್ಲಿ ಶ್ರೀಮಾ ಪ್ರಿಯದರ್ಶಿನಿ
ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರಶಾಂತ್ ಬಿ., ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಶಾಲೆಯ (Alwas English Medium School) ಮುಖ್ಯ ಶಿಕ್ಷಕಿ ವಿಜಯಾ ಟಿ. ಮೂರ್ತಿ, ಆಡಳಿತಾಧಿಕಾರಿ ಪ್ರೀತಂ ಕುಂದರ್ ಹಾಗೂ ಸಹಾಯ ಆಡಳಿತಾಧಿಕಾರಿ ರಾಜೇಶ್ ಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.