ಮೂಡುಬಿದಿರೆ: ಕಲಿಯಲು, ಸ್ಫೂರ್ತಿ ಪಡೆಯಲು, ಗೆಲ್ಲಲು ಉತ್ತಮ ವೇದಿಕೆಯನ್ನು ಅಪೇಕ್ಷಿಸಬಾರದು. ಅದನ್ನು ನಾವೇ ಸೃಷ್ಟಿಸಬೇಕು.ಜೀವನದಲ್ಲಿ ಸೋಲು ಗೆಲುವಿಗಿಂತ ಹೆಚ್ಚಿನ ಪಾಠವನ್ನು ಕಲಿಸುತ್ತದೆ ಎಂದು ಝರಿ ಕೌಟರ್ ಸ್ಥಾಪಕಿ ನಂದಿತಾ ಆಚಾರ್ಯ ಹೇಳಿದರು.
ಆಳ್ವಾಸ್ ಕಾಲೇಜಿನ ಮುಂಡ್ರುದೆಗುತ್ತು ಕೆ.ಅಮರನಾಥ ಶೆಟ್ಟಿ ಸ್ಮಾರಕ ಸಭಾಂಗಣದಲ್ಲಿ (Mundrudeguthu K.Amarnath Shetty Memorial Hall) ವ್ಯವಹಾರ ಆಡಳಿತ ಪದವಿ ವಿಭಾಗ ಆಯೋಜಿಸಿದ್ದ ದಿ ಮ್ಯಾಟ್ರಿಕ್ಸ್ 2023 (The Matrix 2023) ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದನ್ನ ಓದಿ: ಶ್ರೀ ಮಹಾವೀರ ಕಾಲೇಜಿನಲ್ಲಿ ಶೂನ್ಯ ನೆರಳಿನ ದಿನ ವೀಕ್ಷಣೆ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ (Trustee of Alvas Education Foundation Vivek Alva), ಪ್ರಾಂಶುಪಾಲ ಡಾ.ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಬಿ.ಬಿ.ಎ ವಿಭಾಗದ ಮುಖ್ಯಸ್ಥೆ ಸುರೇಖಾ ರಾವ್, ಉಪನ್ಯಾಸಕಿ ಅಂಬಿಕಾ.ಕೆ ಮತ್ತು ಪ್ರಜ್ಞಾ ಎಸ್.ಬಿ, ವಿದ್ಯಾರ್ಥಿ ಸಂಯೋಜಕ ಸುಶಾನ್ ಶೆಟ್ಟಿ ಮತ್ತು ಶಾಶ್ವತ್ ರೈ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಭೂಮಿಕಾ ಬಿ.ಎಚ್ ನಿರೂಪಿಸಿದರು. ಎನ್. ಖತೀಜಾ ಸ್ವಾಗತಿಸಿದರು. ಅನುಪಮಾ ವಂದಿಸಿದರು.