“ಹೋಂಡಾ(Honda), ಹುಂಡೈ ಇಂಡಿಯಾ(Hudai India), ಟಾಟಾ ಮೋಟರ್ಸ್(Tata motors), ಮಾರುತಿ ಸುಜುಕಿ(Maruti Suzuki), ಕಿಯಾ , ಟಾಟಾ ಮೋಟರ್ಸ್(Tata motors), ಮರ್ಸಿಡಿಸ್ ಬೆಂಜ್(Mercedes benz), ಆಡಿ(Audi), ಬೆಲೆಯಲ್ಲಿ ಭಾರೀ ಏರಿಕೆಯಾಗಲಿದೆ. ಕಾರಿನ ವಿವಿಧ ಮಾಡೆಲ್‌ಗಳ(model) ಬೆಲೆ ಏರಿಕೆಯಿಂದಾಗಿ 2023ರಲ್ಲಿ ಕಾರಿನ ಬೆಲೆಯಲ್ಲಿ ಭಾರೀ ಏರಿಕೆಯಾಗಲಿದೆ. ಹೆಚ್ಚುತ್ತಿರುವ ಇನ್‌ಪುಟ್(input) ವೆಚ್ಚವನ್ನು ಸರಿದೂಗಿಸಲು ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಕಾರು ಕಂಪನಿ ಪ್ರಕಟನೆಯಲ್ಲಿ ತಿಳಿಸಿದೆ.
ಹೋಂಡಾ ಜಪಾನಿನ ಕಾರು ತಯಾರಕ ಕಂಪನಿಯು ತನ್ನ ವಾಹನಗಳ ಬೆಲೆಯನ್ನು 30,000 ರೂಪಾಯಿವರೆಗೆ ಹೆಚ್ಚಿಸಬಹುದು ಎಂದು ಅಂದಾಜಿಸಲಾಗಿದೆ. ಹುಂಡೈ ಇಂಡಿಯಾದ(Hyundai India) ವಿವಿಧ ಮಾಡೆಲ್‌ಗಳ ಬೆಲೆಯಲ್ಲಿಯೂ ಬದಲಾವಣೆಯಾಗಲಿದೆ. ಜನವರಿ 2023ರಿಂದ ಹೊಸ ಬೆಲೆ ಜಾರಿಗೆ ಬರಲಿದೆ.
ಜೀಪ್ (Jeep) ಇಂಡಿಯಾದ ವಿವಿಧ ಮಾದರಿಯ ಜೀಪ್ SUVಗಳ ಬೆಲೆಯು ಶೇ 4 ರಷ್ಟು ಏರಿಕೆ ಕಾಣಲಿವೆ. ಟಾಟಾ ಮೋಟರ್ಸ್ಈ ಕಂಪನಿಯು ICE ಮತ್ತು EVs ಮಾದರಿಗಳೆರಡರ ಬೆಲೆಯನ್ನೂ ಏರಿಸಲಿದೆ.
ಕಿಯಾ ಇಂಡಿಯಾ(Kiya India) 2023ರ ಜನವರಿಯಿಂದ ಕಿಯಾ ವಾಹನಗಳು ₹50ಸಾವಿರದವರೆಗೆ ದುಬಾರಿಯಾಗಲಿವೆ. ಐಷಾರಾಮಿ ಕಾರು ಮರ್ಸಿಡಿಸ್ ಬೆಂಜ್ ಕಂಪನಿಯು ಬೆಲೆಯನ್ನು ಶೇ 5 ರಷ್ಟರ ಮಟ್ಟಿಗೆ ಹೆಚ್ಚಿಸಲಿದೆ.
ಎಂಜಿ ಮೋಟಾರ್(MG motor) ಕಂಪನಿಯು ತನ್ನ SUV ಬೆಲೆಯನ್ನು ₹90 ಸಾವಿರದವೆರೆಗೆ ಏರಿಕೆ ಮಾಡಲಿದೆ. ಆಡಿ ಇಂಡಿಯಾ ಕಂಪನಿಯು ಜನವರಿ 2023ರಿಂದ ಕಾರಿನ ಬೆಲೆಯನ್ನು ಶೇಕಡಾ 1.7 ರಷ್ಟು ಹೆಚ್ಚಿಸಲಿದೆ. ಈ ಮೂಲಕ ಹೆಚ್ಚಿನ ಎಲ್ಲ ಪ್ರಮುಖ ಕಾರು ಕಂಪನಿಗಳ ಕಾರಿನ ಬೆಲೆಯಲ್ಲಿ ಏರಿಕೆಯಾಗುವುದು ಖಚಿತವಾಗಿದೆ.