ಮೂಡುಬಿದಿರೆ: ಕಳೆದ ಹಲವು ವರ್ಷಗಳಿಂದ ಪ್ಲಾಸ್ಟಿಕ್ (Plastic) ಹೊದಿಕೆಯ ಮನೆಯಲ್ಲಿ ವಾಸವಾಗಿದ್ದ ಬಾಬು ಪೂಜಾರಿ (Babu Poojary) ಕುಟುಂಬಕ್ಕೆ ಕುಮಾರ್, ರೋಟರಿ ಕ್ಲಬ್ ಆಫ್ ಮಿಡ್ ಟೌನ್(Rotary Club of mid town), ತಾ.ಪಂ.ಸದಸ್ಯೆ ರೀಟಾ ಕುಟಿನ್ಹಾ ಅವರ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ ರೂ 7ಲಕ್ಷ (Seven Lack) ವೆಚ್ಚದಲ್ಲಿ h ನೂತನ ಮನೆ ” ತುಡರ್”(Tudar) ಇದರ ಹಸ್ತಾಂತರವು ಕಾರ್ಯಕ್ರಮವು ಶನಿವಾರ (Saturday) ನಡೆಯಿತು.
ರಾಷ್ಟ್ರೀಯ ಬಿಲ್ಲವ (Billava) ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್ (Rajashekara Kotian) ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾಸಕ ಉಮಾನಾಥ ಕೋಟ್ಯಾನ್ ಕೀಯನ್ನು (Key) ಹಸ್ತಾಂತರಿಸಿ ಮಾತನಾಡಿ ಹೊಟ್ಟೆಗೆ ತಿನ್ನಲು ಆಹಾರ, ಧರಿಸಲು ಬಟ್ಟೆ ಹಾಗೂ ಕೂರಲೊಂದು ಮನೆ ಇದು ಪ್ರತಿಯೊಬ್ಬನಿಗೂ ಬೇಕಾದ ಅಗತ್ಯ ವಸ್ತುಗಳು. ಬಡ ಕುಟುಂಬಕ್ಕೆ ಆಶ್ರಯ ನೀಡುವುದು ಉತ್ತಮ ಕೆಲಸ. ಸರಕಾರವು ಬಡವರಿಗೆ ಮನೆ ನೀಡುತ್ತದೆ. ಆದರೆ ಅದಕ್ಕೆ ಬೇಕಾದ ಸರಿಯಾದ ದಾಖಲೆಪತ್ರಗಳು ಬೇಕಾಗುತ್ತದೆ. ದಾಖಲೆ ಪತ್ರಗಳು ಸರಿ ಇಲ್ಲದಿರುವುದರಿಂದ ಮನೆ ಕೊಡಲು ಕಷ್ಟವಾಗುತ್ತದೆ. ಇದರಿಂದಾಗಿ ದಾನಿಗಳ ಸಹಕಾರ ಪಡೆದು ಮನೆಗಳನ್ನು ನಿರ್ಮಿಸಿ ಕೊಡಬೇಕಾಗುತ್ತದೆ ಎಂದ ಅವರು ತಮಗೆ ಮನೆ ನಿರ್ಮಿಸಿಕೊಟ್ಟವರನ್ನು ಯಾವತ್ತೂ ಮರೆಯಬೇಡಿ. ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳು ಇತರ ಅಶಕ್ತರಿಗೆ ಸಹಾಯ ಮಾಡುವಂತಹ ಗುಣವನ್ನು ಬೆಳೆಸಿಕೊಳ್ಳಲಿ ಎಂದು ಶುಭ ಹಾರೈಸಿದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ (Abhayachandra Jain)ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಬಡವರಿಗೆ ತಾನು ಸಹಕಾರ ನೀಡಿದ್ದರಿಂದ ಕಳೆದ ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಲು ಸಹಕಾರಿಯಾಯಿತು. ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಉಳುವವನೆ ಹೊಲದೊಡೆಯ ಎಂಬ ಕಾನೂನನ್ನು ಜಾರಿಗೆ ತಂದಿರುವುದರಿಂದ ಬಿಲ್ಲವ, ದೇವಾಡಿಗ, ಎಸ್ ಸಿ, ಎಸ್ ಟಿಯವರಿಗೆ(SCST) ಭೂಮಿಯ ಒಡೆತನ ಸಿಗುವ ಮೂಲಕ ಸಹಕಾರಿಯಾಗಿತ್ತು. ಹಿಂದುತ್ವ ಕೇವಲ ಒಬ್ಬನ ಆಸ್ತಿಯಲ್ಲ. ದೇಶಪ್ರೇಮ, ಬಡವರ ಬಗ್ಗೆ ಮಾತನಾಡುವವರು ತಮ್ಮ ಮಕ್ಕಳನ್ನು ಮಿಲಿಟ್ರಿಗೆ (military)ಕಳುಹಿಸಬೇಕು. ಆಗ ಮಾತ್ರ ದೇಶಪ್ರೇಮದ ಬಗ್ಗೆ ಮಾತನಾಡಲು ಅರ್ಹತೆ ಇರುವುದು ಎಂದ ಅವರು ಕುಮಾರ್ ಮತ್ತು ದಾನಿಗಳು ಬಡವರಿಗೆ ಆಶ್ರಯ ನೀಡುವ ಮೂಲಕ ಉತ್ತಮ ಕೆಲಸವನ್ನು ನಿರ್ವಹಿಸಿದ್ದಾರೆಂದರು.
ಸನ್ಮಾನ
ದಾನಿ, ವಿದ್ಯುತ್ ಗುತ್ತಿಗೆದಾರ ಕುಮಾರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು(Facilitate). ಹಾಗೂ ಸಹಕಾರ ನೀಡಿರುವ ದಾನಿಗಳನ್ನು (Donars) ಗುರುತಿಸಿ ಗೌರವಿಸಲಾಯಿತು.
ಯುವ ಮುಂದಾಳು ಮಿಥುನ್ ರೈ (Mithun Rai), ತಾ.ಪಂ.ಮಾಜಿ ಸದಸ್ಯೆ ರೀಟಾ ಕುಟಿನ್ಹಾ, ಇರುವೈಲ್(Iruvail) ಗ್ರಾ.ಪಂ.ಅಧ್ಯಕ್ಷೆ ವಲೇರಿಯನ್ ಕುಟಿನ್ಹಾ, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ತೋಡಾರು ಗುತ್ತಿನ ಚಂದ್ರರಾಜ ಬಲಿಪ, ಎಪಿಎಂಸಿ ಸದಸ್ಯ ಚಂದ್ರಹಾಸ ಸನಿಲ್, ರೋಟರಿ ಕ್ಲಬ್ ಆಫ್ ಮಿಡ್ಟೌನ್ ನ ಅಧ್ಯಕ್ಷ ಪುಷ್ಪರಾಜ್ ಜೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬಾಬು ಪೂಜಾರಿ ದಂಪತಿ ಈ ಸಂದರ್ಭದಲ್ಲಿದ್ದರು.
ಅರ್ಚಕ ರತೀಶ್ ಭಟ್ ಗೃಹಪ್ರವೇಶದ (House inauguration)ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
ಸೀನ ನಾಯ್ಕ್(Seena Nayk) ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.