ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ ಹಾಗೂ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು (Wamadapada Government First grade College) ಆಶ್ರಯದಲ್ಲಿ ನಡೆದ ಅಂತರ ಕಾಲೇಜು ಹಗ್ಗ ಜಗ್ಗಾಟದ ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಚಾಂಪಿಯನ್ ಹಾಗೂ ಪುರುಷರ ತಂಡವು ರನ್ನರ್ ಅಪ್ ಸ್ಥಾನ (Runner up position) ಪಡೆದುಕೊಂಡಿದೆ.
ಇದನ್ನ ಓದಿ: ಮಂಗಳೂರು ವಿ.ವಿ. ಅಂತರ್‌ವಲಯ ಥ್ರೋಬಾಲ್ ಸತತ 5ನೇ ಬಾರಿ ಆಳ್ವಾಸ್ ಚಾಂಪಿಯನ್
ಮಹಿಳೆಯರ ಫೈನಲ್‌ನಲ್ಲಿ ಆಳ್ವಾಸ್ ಕಾಲೇಜು ತಂಡವು ಅಜ್ಜರಕಾಡು ಡಾ.ಜಿ.ಶಂಕರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು ಸೋಲಿಸಿದ್ದರೆ, ಸೆಮಿಫೈನಲ್‌ನಲ್ಲಿ ಉಜಿರೆ ಎಸ್‌ಡಿಎಂ ಕಾಲೇಜು ವಿರುದ್ಧ ಜಯ ಸಾಧಿಸಿತ್ತು.
ಪುರುಷರ ಸೆಮಿಫೈನಲ್‌ನಲ್ಲಿ ಆಳ್ವಾಸ್ ತಂಡವು ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು ಮಣಿಸಿತ್ತು. ಆದರೆ, ಫೈನಲ್‌ನಲ್ಲಿ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು (Nehru Memorial College, Sulya) ವಿರುದ್ಧ ಸೋಲು ಕಂಡಿತು.
ಎರಡೂ ತಂಡಗಳಿಗೆ ತರಬೇತುದಾರ ಪಾರ್ಶ್ವನಾಥ್ ಜೈನ್ ತರಬೇತಿ ನೀಡಿದ್ದರು. ವಿಜೇತರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.