ಮೂಡುಬಿದಿರೆ: ಇತ್ತೀಚಿಗೆ ಜಿನೈಕ್ಯರಾದ ಶ್ರವಣಬೆಳಗೊಳದ ಭಟ್ಟಾರಕ ಕರ್ಮ ಯೋಗಿ ಶ್ರೀಗಳವರಿಗೆ ಮೂಡುಬಿದಿರೆಯಲ್ಲಿ ವಿನಯಾಂಜಲಿ ಪೂಜೆ (Vinayajali Puja) ನಡೆಯಿತು. ಇಲ್ಲಿನ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ (Charukeerthi Bhattarak Panditacharyavarya Maha Swamiji) ಉಪಸ್ಥಿತಿ ಯಲ್ಲಿ ಏಪ್ರಿಲ್ 14 ರಿಂದ 8 ರ ವರೆಗೆ ಮೂಡುಬಿದಿರೆಯ 18 ಬಸದಿ ಗಳಲ್ಲಿ ಗೋಷ್ಠಿ ಪೂಜೆ ಸಾವಿರ ಕಂಬ ಬಸದಿ (A thousand pillars) ಯಲ್ಲಿ 108 ಕಲಶ ಅಭಿಷೇಕ , ಶ್ರೀ ಮಠ, ಪಡು ಬಸದಿ ಗಳಲ್ಲಿ ವಿಶೇಷ ಪೂಜೆ ನೆರವೇರಿತು.
ಕಳೆದ ಐದು ದಶಕ ಗಳಲ್ಲಿ ಬೆಳಗೊಳ ಪೀಠ ದ ಭಟ್ಟಾರಕ ರಾಗಿ ಧರ್ಮ ಶಿಕ್ಷಣ ಆರೂಗ್ಯ, ಸಮಾಜ ಸೇವೆಗೆ ತಮ್ಮ ಜೇವನ ಮೂಡಿ ಪಾಗಿಟ್ಟ ಶ್ರೇಷ್ಠ ಸಾಧಕ ಸ್ವರ್ಗಸ್ಥ ಕರ್ಮ ಯೋಗಿ ಸ್ವಾಮೀಜಿ, ಮೂಡುಬಿದಿರೆಯ ಹಿಂದಿನ ಹಾಗೂ ಈಗಿನ ಸ್ವಾಮೀಜಿ ಸೇರಿದಂತೆ ಸುಮಾರು 12 ಪಟ್ಟಾಚಾರ್ಯರಿಗೆ ದೀಕ್ಷೆ ನೀಡಿ ದಕ್ಷಿಣ ಭಾರತದ (South India)+ಕ್ಷೇತ್ರಗಳ ಜೀರ್ಣೋದ್ದಾರ, ಧರ್ಮ ಜಾಗೃತಿ ಗೆ ವಿಶೇಷ ಪರಿಶ್ರಮ ಪಟ್ಟವರು.
ಮೂರು ವರ್ಷ ಪೂರ್ವದಲ್ಲೇ ಸಲ್ಲೇಖನ ಸಮಾಧಿ ಮರಣ ಸಂಕಲ್ಪ ಕೈಗೊಂಡು ಧರ್ಮ ಸಾಧನೆ ಯಲ್ಲಿದ್ದ ಗುರು ಬೆಳಗೊಳದ ಹಿರಿಯ ಸ್ವಾಮೀಜಿ ಯವರ ಆತ್ಮಕ್ಕೆಉತ್ತಮ ಸದ್ಗತಿ ಪ್ರಾಪ್ತಿಯಾಗಲಿ ಎಂದು ಭಗವಾನ್ ಚಂದ್ರನಾಥ ಸ್ವಾಮಿ, ಪಾರ್ಶ್ವನಾಥ ಸ್ವಾಮಿಯವರಲ್ಲಿ ಪ್ರಾರ್ಥಿಸಿ ಭಕ್ತಿ ಪೂರ್ವಕ ವಿನಾಯಾಂಜಲಿ ಅರ್ಪಿಸುವುದಾಗಿ ಮೂಡು ಬಿದಿರೆಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ತಿಳಿಸಿದರು. ನಮೋಕಾರ ಮಂತ್ರ ಪಠಿಸಿ ಆಗಮಿಸಿದ ಎಲ್ಲಾ ಧರ್ಮ ಬಂಧು ಗಳು ಸಾವಿರ ಕಂಬ ಬಸದಿ ಯಲ್ಲಿ ಸಾಮೂಹಿಕ ಸದ್ಗತಿ ಪ್ರಾರ್ಥನೆ ವಿನಾಯಾ oಜಲಿಸಭೆ ಯಲ್ಲಿ ಪಾಲ್ಗೊಂಡರು. ಸಾವಿರ ಕಂಬ ಬಸದಿಯಲ್ಲಿ 108 ಕಲಶ ಅಭಿಷೇಕ ಉತ್ಸವ ಪೂರ್ಣಗೊಳ್ಳುತ್ತಿದ್ದಂತೆ ಮಹಾ ಶಾಂತಿ ದ್ವಾರದ ಬಸದಿ ಪರಿಸರದಲ್ಲಿ ಸುರಿದ ಮಳೆ ವಿಶೇಷವಾಗಿತ್ತು. ಇದು ಶುಭ ಪ್ರತೀಕ ಎಂದು ಶ್ರೀಗಳು ನುಡಿದರು.
ಇದನ್ನ ಓದಿ: ಆಳ್ವಾಸ್‌ನಲ್ಲಿ ಮಹಾವೀರ ಜಯಂತಿಯ ಆಚರಣೆ; ಯಶೋಕಿರಣ ಕಟ್ಟಡ ಉದ್ಘಾಟನೆ
ಮಾಜಿ ಸಚಿವ ಕೆ. ಅಭಯ ಚಂದ್ರ (Former Minister K. Abhaya Chandra), ಪಟ್ಣ ಶೆಟ್ಟಿ ಸುದೇಶ್, ಬಸದಿ ಮುಕ್ತೇಸರರಾದ ದಿನೇಶ್ ಆನಡ್ಕ (Basadi Muktesar Dinesh Anadka), ಆದರ್ಶ್, ಮಿಥುನ್ ರೈ, ಬಾಹುಬಲಿ ಪ್ರಸಾದ್ ಕೆ. ಜೆ ಬೆಂಗಳೂರು, ಸಂಪತ್ ಸಾಮ್ರಾಜ್ಯ,ಪದ್ಮ ಪ್ರಸಾದ್, ಅನಿಲ್ ಸೇಠಿ ಬೆಂಗಳೂರು, ವಿನೋದ್ ದೊಡ್ಡ ಣ್ಣ ,ಬೆಳಗಾವಿ ಕೀರ್ತಿ ವರ್ಮ,ವಜ್ರ ನಾಭ ಚೌಟ, ನಲ್ಲೂರು ಮುಕ್ತೇಸರರು, ಮಹಾವೀರ್ ಜೈನ್ ಹಚ್ಚಾ, ಡಿ ನವೀನ್ ಚಂದ್, ವೀಣ್ ಚಂದ್ರ ಮೊದಲಾದ ವರು ಉಪಸ್ಥಿತರಿದ್ದರು.