ಮೂಡುಬಿದಿರೆ: ಜ್ಞಾನ ಹಾಗೂ ಕೌಶಲದ ಜೊತೆ ಸೃಜನಶೀಲ ಬೌದ್ಧಿಕ ಆಸ್ತಿಯ ಸಂರಕ್ಷಣೆ ಹಾಗೂ ಅನುಷ್ಠಾನವು ಪ್ರಚಲಿತ ಬೆಳವಣಿಗೆಯಾಗಿದೆ. ಯಾವುದೇ ನಾವಿನ್ಯ ಯೋಚನೆ ಇದ್ದರೆ, ಅದಕ್ಕೆ ಯೋಜನೆ ರೂಪಿಸಿ ಫಲಪ್ರದಗೊಳಿಸಲು ಕೆಎಸ್‌ಸಿಎಸ್‌ಟಿ (KSCST) ಸಿದ್ಧವಿದೆ. ಈಗಾಗಲೇ ಹಲವಾರು ಯೋಚನೆ, ಆವಿಷ್ಕಾರಗಳನ್ನು ಕಾರ್ಯಗತಗೊಳಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‌ಸಿಎಸ್‌ಟಿ) ಮುಖ್ಯ ವಿಜ್ಞಾನಾಧಿಕಾರಿ ಡಾ. ಹೇಮಂತ್ ಕುಮಾರ್ ಹೇಳಿದರು.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ (Alvas Engeeneering College)ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಯೋಗದಲ್ಲಿ ಮಂಗಳವಾರ ನಡೆದ ಶೈಕ್ಷಣಿಕ ಪರಿಸರದಲ್ಲಿ ಬೌದ್ಧಿಕ ಆಸ್ತಿಯ ಅಭಿವೃದ್ಧಿ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇದನ್ನ ಓದಿ: ಮಂಗಳೂರು ವಿ.ವಿ ರ‍್ಯಾಂಕ್: ಆಳ್ವಾಸ್‌ಗೆ ಅಗ್ರಸ್ಥಾನ; 22 ರ‍್ಯಾಂಕ್
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ (Vivek Alva), ಪ್ರಾಂಶುಪಾಲ ಡಾ.ಪೀಟರ್ ಫರ್ನಾಂಡಿಸ್, ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ವಿಭಾಗದ (Electronics and Communication Department) ಮುಖ್ಯಸ್ಥ ರಿಚರ್ಡ್ ಪಿಂಟೊ, ಕಾರ್ಯಾಗಾರದ ಸಂಯೋಜಕ ಡಾ.ದತ್ತಾತ್ರೇಯ ಉಪಸ್ಥಿತರಿದ್ದರು. ಕ್ಯಾಥರಿನ್ ನಿರ್ಮಲಾ (Catherine Normala) ನಿರೂಪಿಸಿದರು.