ಮೂಡುಬಿದಿರೆ: ತೋಡಾರಿನಲ್ಲಿ ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯೆನ್ ಸಂಭ್ರಮ 2022 ಸಾಂಸ್ಕೃತಿಕ ಸ್ಪರ್ಧೆ ನಡೆಯಿತು.
ಕಲಾವಿದೆ ಅದ್ವಿಕಾ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಅದ್ವಿಕಾ ಶೆಟ್ಟಿ ಇಂತಹ ಸ್ಪರ್ಧಾ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಮತ್ತು ಕ್ರಿಯಾಶೀಲತೆಗೆ ವೇದಿಕೆಯಾಗುತ್ತದೆ. ವಿದ್ಯಾರ್ಥಿಗಳು ಅವಕಾಶಗಳನ್ನು ಕಳೆದುಕೊಳ್ಳದೆ ಸದುಪಯೋಗ ಪಡಿಸಿಕೊಳ್ಳಬೇಕು. ಆತ್ಮ ವಿಶ್ವಾಸದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಜಿ. ಡಿಸೋಜಾ, ಕ್ಯಾಂಪಸ್ ಆಡಳಿತಾಧಿಕಾರಿ ಮೊಹಮ್ಮದ್ ಶಾಹಿದ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಪ್ರೊ. ದೀಕ್ಷಾ ಕೆ. ಆರ್, ಎಲ್ಲಾ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಮೈಮೂನ ಅತಿಥಿಗಳ ಪರಿಚಯ ಮಾಡಿದರು. ಪಿ.ಎನ್ ಅನ್ವಿತಾ ಕಾರ್ಯಕ್ರಮ ನಿರೂಪಿಸಿದರು.
ಹಾಡುಗಾರಿಕೆ, ರಸಪ್ರಶ್ನೆ, ಗ್ರೂಪ್ ಡಾನ್ಸ್, ರಂಗೋಲಿ, ಪೆನ್ಸಿಲ್ ಸ್ಕೆಚ್, ಚರ್ಚಾ ಸ್ಪರ್ಧೆ, ಮೆಹಂದಿ, ಕೊಲಾಜ್, ಫೋಟೋಗ್ರಫಿ, ಫೇಸ್ ಪೇಂಟಿಂಗ್ ಮೊದಲಾದ 15ಕ್ಕೂ ಅಧಿಕ ವಿಭಾಗಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.