ಮೂಡುಬಿದಿರೆ: ತೋಡಾರಿನ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ (Yenepoya Technical College) ಎರಡು ದಿನಗಳ ಕಾಲ ನಡೆಯಲಿರುವ ತಾಂತ್ರಿಕ ಮತ್ತು ಸಾಂಸ್ಕೃತಿಕ ಹಬ್ಬ ಯೆನ್‌ಫ್ಲಾöಶ್ 2023 (Cultural festival Yenflaösh 2023) ಶನಿವಾರ ನಡೆಯಿತು.
ಕಾಂತಾರ ಚಲನಚಿತ್ರದ ಗುರುವ ಪಾತ್ರಧಾರಿ ಸ್ವರಾಜ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿಗಳು ತಮ್ಮ ಗುರಿ ತಲುಪುವ ತನಕ ಕಠಿಣ ಪರಿಶ್ರಮ ಪಡಬೇಕು ಎಂದರು.
ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ರೋಷನ್ ಮೆಲ್ವಿನ್ ಡಿಸೋಜ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಅನ್ವಿತಾ ಕಾರ್ಯಕ್ರಮ ನಿರೂಪಿಸಿದರು.
ಇದನ್ನ ಓದಿ: ಮೂಡುಬಿದಿರೆ: ನನ್ನ ಲೈಫ್ ನನ್ನ ಸ್ವಚ್ಛ ನಗರ ಅಭಿಯಾನಕ್ಕೆ ಚಾಲನೆ
ಎರಡು ದಿನಗಳ ಕಾಲ ಕ್ವಿಜ್ ದಿಸ್ ಸ್ಪರ್ಧೆ (Quiz for two days), ಚಿತ್ರಕಲೆ, ರಂಗೋಲಿ, ಡಿಬೇಟ್, ಜಾಜ್ ಆಫ್ , ಡಾನ್ಸ್, ರೋಬೊ ವಾರ್, ರೋಬೊ ಸಾಕರ್, ಅಗ್ನಿರಹಿತ ಅಡುಗೆ, ಮೆಹಂದಿ, ಕೋಡಿಂಗ್ ಚಾಲೆಂಜ್, ಪೆನ್ಸಿಲ್ ಸ್ಕೆಚ್, ಫೇಸ್ ಪೇಂಟಿಂಗ್ (Face painting) ಸೇರಿದಂತೆ 30 ಕ್ಕೂ ಅಧಿಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.