ಮೂಡುಬಿದಿರೆ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ (Keladi Shivappa Nayaka University of Agriculture and Horticulture Sciences Shimoga) ಹಾಗೂ ಕೃಷಿ ಮತ್ತು ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಮೂಡುಬಿದಿರೆಯ ಪ್ರಗತಿಪರ ಯುವ ಕೃಷಿಕ ಅಂಬೂರಿ ನಾಗರಾಜ ಶೆಟ್ಟಿಯವರಿಗೆ (Amburi Nagaraja Shetty Progressive young farmer) ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ‘ಶ್ರೇಷ್ಠ ರೈತ ಪ್ರಶಸ್ತಿ’ಯನ್ನು ಶಿವಮೊಗ್ಗದಲ್ಲಿ ನಡೆದ ಕೃಷಿ ಮತ್ತು ತೋಟಗಾರಿಕಾ ಮೇಳದಲ್ಲಿ ಪ್ರದಾನಿಸಲಾಯಿತು.
ಇದನ್ನ ಓದಿ: ಭ್ರಷ್ಟಾಚಾರದ ಆರೋಪ ಮಾಡುವವರು ಧರ್ಮಸ್ಥಳಕ್ಕೆ ಬರಲಿ: ಕೋಟ್ಯಾನ್
ಆನಂದಪುರ ಶ್ರೀ ಮುರುಘ ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಗಳವರ (Anandpur Sri Muruga Math Dr. Mallikarjuna Murugarajendra Mahaswami) ಉಪಸ್ಥಿತಿಯಲ್ಲಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಆರ್. ಸಿ. ಜಗದೀಶ್, ಶಾಸಕ ಡಿ.ಎಸ್. ಸುರೇಶ್ ಮತ್ತಿತರರು ಪ್ರದಾನಗೈದರು.