ಮೂಡುಬಿದಿರೆ: ನೇತಾಜಿ ಬ್ರಿಗೇಡ್‌ನ (Nethaji Brigade)10ನೇ ಸೇವಾ ಯೋಜನೆಯ ಅಂಗವಾಗಿ ಮೂಡುಬಿದಿರೆಯ ಶ್ರೀ ಪುರಾತನ ಆದಿಶಕ್ತಿ ಮಹಾದೇವಿ (Old Adhishakthi Mahadewi Temple)ದೇವಸ್ಥಾನದಲ್ಲಿ ಎರಡು ಕುಟುಂಬಗಳಿಗೆ ಆರ್ಥಿಕ ನೆರವು ಹಸ್ತಾಂತರಿಸಲಾಯಿತು.
ರಕ್ತದ ಕ್ಯಾನ್ಸರ್(Blood Cancer) ಕಾಯಿಲೆಯಿಂದ ಬಳಲುತ್ತಿರುವ ಮೂಡುಬಿದಿರೆಯ ಶ್ರೀಯಾ (Shriya)ಎಂಬ ಮಗುವಿನ ಚಿಕಿತ್ಸಾ ವೆಚ್ಚಕ್ಕಾಗಿ ಮತ್ತು ಬಂಟ್ವಾಳದಲ್ಲಿ ರಶ್ಮಿತ್ ಹಾಗೂ ಶ್ರದ್ಧಾ ಎಂಬುವರ ಮನೆ ನಿರ್ಮಾಣಕ್ಕೆ ತಲಾ ರೂ. 26,568.50 ಮೂಡುಬಿದಿರೆಯ ಉದ್ಯಮಿಗಳಾದ ಪಂಚಶಕ್ತಿ ರಂಜಿತ್ ಪೂಜಾರಿ ಹಾಗೂ ಸುಜಯ ಬಂಗೇರ ಹಸ್ತಾಂತರಿಸಿದರು.
ಎರಡು ಕುಟುಂಬಕ್ಕೆ ನೆರವು ನೀಡುವ ಉದ್ದೇಶದಿಂದ ಜನವರಿ 22ರಂದು ನಡೆದ ಮಂಗಳೂರು ಕಂಬಳದಲ್ಲಿ ವಿಶೇಷ ವೇಷ ಹಾಗೂ ಗೊಂಬೆ ವೇಷ ಧರಿಸಿ ಸೇವಾ ಕಾರ್ಯ ನಡೆಸಲಾಗಿತ್ತು. ಇದರಲ್ಲಿ ಒಟ್ಟು ರೂ.53,137 ಸಂಗ್ರಹವಾಗಿದ್ದು ಎರಡು ಕುಟುಂಬಕ್ಕೆ ಸಮಾನವಾಗಿ ನೀಡಲಾಯಿತು.
ವಿಶೇಷ ವೇಷವನ್ನು ನೇತಾಜಿ ಬ್ರಿಗೇಡ್ ಸದಸ್ಯ ಸುಶಾಂತ್ ಸುವರ್ಣ ಧರಿಸಿದ್ದು. ಗೊಂಬೆ ವೇಷವನ್ನು ನಿತ್ಯಾನಂದ ಹಾಗೂ ಸುಜಾನ್, ದರ್ಶನ್ ವಿದ್ಯಾನಗರ, ಶ್ರವಣ್ ವಿದ್ಯಾನಗರ, ಮೋಹನದಾಸ್, ಚಂದ್ರಹಾಸ್ ಅಬ್ಬೆಟ್ಟು ಧರಿಸಿದ್ದರು. ಸೇವಾ ಕಾರ್ಯದಲ್ಲಿ ನೀತು ಫ್ರೆಂಡ್ಸ್ ವಿದ್ಯಾನಗರ ಪಂಜಿಮೊಗರು, ಶಿವಾಜಿ ಫ್ರೆಂಡ್ಸ್ ವಿದ್ಯಾನಗರ ಪಂಜಿಮೊಗರು(Shivaji Friends Vidyanagar Panjimogar), ಅಬ್ಬೆಟ್ಟಿನ ಉತ್ಸಾಹಿ ಯುವಕರು ಮತ್ತು ಧರ್ಮಶಾಸ್ತ ಭಕ್ತವೃಂದ ಕಲ್ಲುರ್ಟಿ ಕ್ಷೇತ್ರ ಪಂಪ್ ಹೌಸ್ ಕೂಳೂರು ಸಂಸ್ಥೆಯ ಸದಸ್ಯರು ಸಹಕರಿಸಿದ್ದರು.
ನೆರವು ವಿತರಣೆ ಕಾರ್ಯಕ್ರಮದಲ್ಲಿ ನೇತಾಜಿ ಬ್ರಿಗೇಡ್ ಸಂಚಾಲಕ ರಾಹುಲ್ ಕುಲಾಲ್, ಪದಾಧಿಕಾರಿಗಳಾದ ಕುಮಾರ್ ಮಾಸ್ತಿಕಟ್ಟೆ, ಸುನೀಲ್ ಗಾಂಧಿನಗರ, ರಾಜೇಶ್ ನಾಯ್ಕ, ಸುಶಾಂತ್ ಸುವರ್ಣ, ಪ್ರಶಾಂತ್, ವರುಣ್, ಧನುಷ್ ಕುಲಾಲ್, ಮೋಹನ್‌ದಾಸ್ ಉಪಸ್ಥಿತರಿದ್ದರು.