ಮೂಡುಬಿದಿರೆ: ಸುಮಾರು 800 ವರ್ಷಗಳ ಇತಿಹಾಸವಿರುವ ಮಾರೂರು ಹೊಸಂಗಡಿ ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನವನ್ನು(Shree Gopalakrishna Kodamanitthaya Temple)ಸುಮಾರು 4.25ಕೋಟಿ(4.25 Crore) ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಲು(Construction) ಯೋಜಿಸಲಾಗಿದ್ದು ಗೋಪಾಲಕೃಷ್ಣ ದೇವರ ಮೂಲಬಿಂಬ ಸಂಕೋಚ ಬಾಲಾಲಯ ಪ್ರತಿಷ್ಠೆಯನ್ನು ಎಡಪದವು ತೆಂಕುಮನೆ ಮುರಳೀಧರ ತಂತ್ರಿಯವರ(Thenku Mane Muralidhara Thanthri)ನೇತೃತ್ವದಲ್ಲಿ ನೆರವೇರಿಸಲಾಯಿತು.
ಅಲಂಗಾರಿನಲ್ಲಿ 48ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ
ಶಾಸಕ ಉಮಾನಾಥ ಕೋಟ್ಯಾನ್(Umanath Kotian) ಅವರು ದೇವಸ್ಥಾನದ ಇತಿಹಾಸ ಸಹಿತ ಜೀರ್ಣೋದ್ಧಾರ ಕುರಿತಾದ ವಿಜ್ಞಾಪನ ಪತ್ರವನ್ನು ಬಿಡುಗಡೆಗೊಳಿಸಿ ಶಾಸಕರ ನಿಧಿ ಮತ್ತು ನಳಿನ್‌ಕುಮಾರ್ ಕಟೀಲು(Nalin Kumar Katil)ಆವರ ಮೂಲಕ ಸಂಸದರ ನಿಧಿಯಿಂದ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್(Abhayachandra Jain), ಮಿಥುನ್ ರೈ(Mithun Rai) , ಉದ್ಯಮಿ ಎ.ಕೆ. ರಾವ್, ದೇವಸ್ಥಾನದ ಆಡಳಿತ ಮೊಕ್ತೇಸರ ಹೊಸಂಗಡಿ ಅರಮನೆ ಎಸ್. ಸಂಪತ್ ಕುಮಾರ್ ಶೆಟ್ಟಿ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಶ್ರೀಪತಿ ಭಟ್, ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಮಾರೂರು ಖಂಡಿಗ ರಾಮದಾಸ ಆಸ್ರಣ್ಣ, ಪ್ರಧಾನ ಮಾರ್ಗದರ್ಶಕ ಎ. ಜೀವಂಧರ ಕುಮಾರ್ ಪಡ್ಯಾರಬೆಟ್ಟ, ಕಾರ್ಯಾಧ್ಯಕ್ಷ ಶಂಭು ಎನ್. ಶೆಟ್ಟಿ, ಕಾರ್ಯದರ್ಶಿ ಗೋಪಾಲ ಕೋಟ್ಯಾನ್ ಬಾನಿಲು, ಕೋಶಾಧಿಕಾರಿ ಶ್ರೀಧರ ಕೆಮ್ಮಾರ್ ಮತ್ತಿತರ ಪದಾಧಿಕಾರಿಗಳ ಸಹಿತ ದೇವಸ್ಥಾನದ ಮಾಗಣೆಯವರು, ಗುತ್ತು ಬರ್ಕೆಯವರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.