ಮೂಡುಬಿದಿರೆ: 60ರ ಸಂಭ್ರಮದಲ್ಲಿರುವ ಮೂಡುಬಿದಿರೆಯ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ (Shri Sarvajanik Ganeshotsav Committee) ವತಿಯಿಂದ ಆಳ್ವಾಸ್ ಹೆಲ್ತ್ ಸೆಂಟರ್ (Alvas Health Centre), ಸಮಾಜ ಮಂದಿರ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ (Samaj Mandir and Sarvajanik ganeshotsav trust) ಇವುಗಳ ಸಂಯುಕ್ತ ಆಶ್ರಯದಲ್ಲಿ ಸಮಾಜ ಮಂದಿರದಲ್ಲಿ ರಕ್ತದಾನ ಶಿಬಿರ (Blood donation camp) ಭಾನುವಾರ ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್ (MLA Umanatha Kotyan) ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ರಕ್ತದಾನವು ಶ್ರೇಷ್ಠವಾದ ದಾನ. ನಾವು ನಮ್ಮ ದೇಹದಿಂದ ರಕ್ತದಾನ ಮಾಡಿದರೆ ಮತ್ತೆ ಅಷ್ಟೇ ವೇಗದಲ್ಲಿ ರಕ್ತ ಉತ್ಪತ್ತಿಯಾಗಿ ನಮ್ಮ ದೇಹದಲ್ಲಿ ಶೇಖರಣೆಯಾಗುತ್ತದೆ. ನಾವು ದಾನ ಮಾಡುವ ರಕ್ತವು ತುರ್ತು ಅವಶ್ಯಕತೆಗೆ ಉಪಯೋಗವಾಗುತ್ತದೆ ಇದರಿಂದ ಆರೋಗ್ಯವಂತ ಹೆಚ್ಚಿನ ಜನರು ರಕ್ತದಾನ ಮಾಡಲು ಮನಸ್ಸು ಮಾಡಬೇಕಾಗಿದೆ ಎಂದ ಅವರು ಈ ನಿಟ್ಟಿನಲ್ಲಿ ಗಣೇಶೋತ್ಸವ ಸಮಿತಿಯವರು ರಕ್ತದಾನದಂದಹ ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಕ್ಕೆ ಅಭಿನಂದಿಸಿದರು.
ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೆ.ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ಗಣೇಶೋತ್ಸವ ಸಮಿತಿಗೆ 60 ತುಂಬಿರುವುದರಿಂದ ಪ್ರತಿ ತಿಂಗಳು ಒಂದೊಂದು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಇದನ್ನ ಓದಿ: ಫೆ.25ರಂದು ಮೂಡುಬಿದಿರೆಯಲ್ಲಿ ಡಾ. ರಾಜ್ ಸವಿನೆನಪು
ಮಾಜಿ ಸಚಿವ, ಸಮಾಜ ಮಂದಿರ ಸಭಾದ ಅಧ್ಯಕ್ಷ ಅಭಯಚಂದ್ರ ಜೈನ್ (Abhay Chandra Jain) ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಇನ್ನೊಬ್ಬರ ಜೀವವನ್ನು ಬದುಕಿಸುವಂತಹ ಶಕ್ತಿ ರಕ್ತಕ್ಕಿದೆ. ಇಂದಿನ ದಿನಗಳಲ್ಲಿ ರಕ್ತದಾನ ಮಾಡುವುದರ ಜತೆಗೆ ಅಂಗಾಂಗಳ ದಾನವನ್ನು ನಡೆಯುತ್ತಿರುವುದು ಶ್ಲಾಘನೀಯ.
ಆಳ್ವಾಸ್ ಆಸ್ಪತ್ರೆಯ ಪಿಆರ್ ಓ ರಾಜೇಶ್ (Alvas Hospital PR O Rajesh) ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹರೀಶ್ ಎಂ.ಕೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.