ಮೂಡಬಿದಿರೆ: ಪ್ರಸಿದ್ಧ ಹೃದಯ ತಜ್ಞರಾದ ಡಾ. ಪದ್ಮನಾಭ ಕಾಮತ್ ರವರನ್ನು (Cardiologist Dr. Padmanabha Kamat) ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ,ಮೂಡುಬಿದಿರೆ ಪ್ರೆಸ್ ಕ್ಲಬ್ (Moodbidire Press Club) ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಡಾ. ಪದ್ಮನಾಭ ಕಾಮತ್‌ರವರು ವೈದ್ಯಕೀಯ ಸೇವಾರಂಗದಲ್ಲಿ ಸಲ್ಲಿಸುತ್ತಿರುವ ಪ್ರಮಾಣಿಕ ಸೇವೆಗೆ ರಾಷ್ಟ್ರದ ಪ್ರಧಾನಿ ಅವರಿಂದ ಗೌರವಿಸಲ್ಪಟ್ಟಿದ್ದಾರೆ. ತಳ ಮಟ್ಟದ ಜನತೆ ಕೂಡ ಡಾ ಕಾಮತ್ ರವರ ಸೇವೆಯನ್ನು ಸದಾ ಸ್ಮರಿಸುವಂತೆ ಅವರು ಸೇವೆಯಲ್ಲಿ ಜನ ಮನ ಗೆದ್ದಿದ್ದಾರೆ ಎಂದು ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಶ್ಲಾ಼ಘಿಸಿದರು. ಗೌರವ ಸ್ವೀಕರಿಸಿ ಮಾತಾನಾಡಿದ ಡಾ ಪದ್ಮನಾಭ ಕಾಮತ್ ಅವರು, ಸಮಾಜಕ್ಕೆ ಪತ್ರಕರ್ತರ ಕೊಡುಗೆ ಅಪಾರ. ಪತ್ರಕರ್ತರು ಸದಾ ಸಮಾಜದ ಆರೋಗ್ಯಕ್ಕಾಗಿ ದುಡಿಯುತ್ತಿರುವವರು. ಅವರು ಕೂಡ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಸಲಹೆ ನೀಡಿದರು.
ಇದನ್ನ ಓದಿ: ಅಭಯಚಂದ್ರ ಜೈನ್‌ಗೆ ಬ್ಲಾಕ್ ಕಾಂಗ್ರೆಸ್‌ನಿಂದ ಅಭಿನಂದನೆ
ಈ ಸಂದರ್ಭ ಮೂಡುಬಿದಿರೆ ಪತ್ರಕರ್ತರ ಸಂಘದ ಅಧ್ಯಕ್ಷ ವೇಣುಗೋಪಾಲ್ (Venugopal, president of the Journalists Association) ಕಾರ್ಯದರ್ಶಿ ಶರತ್ ದೇವಾಡಿಗ ಸಹಿತ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಳಿಕ ಪತ್ರಕರ್ತರಿಗೆ ಹೃದಯ ತಪಾಸಣೆಯನ್ನು ನಡೆಸಲಾಯಿತು.