ಮೂಡುಬಿದಿರೆ: ಹೊಸಂಗಡಿ- ಶಿರ್ತಾಡಿಗೆ (Hosangadi- Shirtadi) ಸಂಪರ್ಕ ಕಲ್ಪಿಸುವ ಶಿರ್ತಾಡಿ ಗ್ರಾಪಂ ವ್ಯಾಪ್ತಿಯ ಪಾಪೆ ಎಂಬಲ್ಲಿ ರೂ.9.97 ಕೋ.ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸೇತುವೆ ಸಹಿತ ಕಿಂಡಿ ಅಣೆಕಟ್ಟಿಗೆ ಶಾಸಕ ಉಮಾನಾಥ ಎ.ಕೋಟ್ಯಾನ್ (MLA Umanatha A. Kotyan) ಶಿಲಾನ್ಯಾಸ ನೆರವೇರಿಸಿದರು.
ಈ ಭಾಗದ ಜನರ ಬಹಳ ವರ್ಷಗಳ ಹಿಂದಿನ ಬೇಡಿಕೆಯಾಗಿದ್ದು ಈ ಭಾಗದ ಕೃಷಿಕರಿಗೆ ಮತ್ತು ಕುಡಿಯುವ ನೀರಿಗೆ ಎರಡಕ್ಕೂ ಲಾಭದಾಯಕವಾಗಿ ಡ್ಯಾಂ ನಿರ್ಮಾಣವಾಗಬೇಕೆಂಬ ನಿಟ್ಟಿನಲ್ಲಿ ನೆರವೇರಿಸಲಾಗಿದೆ. ಅಣೆಕಟ್ಟು ನಿರ್ಮಾಣದಿಂದಾಗಿ ಶಿರ್ತಾಡಿ ಮತ್ತು ಹೊಸಂಗಡಿ ನದಿಗಳು ಬಂದು ಸೇರುತ್ತವೆ. ಸುತ್ತಮುತ್ತಲಿರುವ 200 ಎಕರೆ ಕೃಷಿ ಭೂಮಿಗೆ ಪ್ರಯೋಜನವಾಗಲಿದ್ದು,ಬಾವಿಗಳಲ್ಲಿ, ಕೊಳವಿ ಬಾವಿಗಳಲ್ಲಿ ನೀರು ದೊರಕಲು ಸುಲಭವಾಗುತ್ತದೆ. ಈಗಾಗಲೇ ಕ್ಷೇತ್ರದಲ್ಲಿ ಸುಮಾರು 100 ಕೋಟಿಯಷ್ಟು ಅಧಿಕ ಅನುದಾನದಲ್ಲಿ ಡ್ಯಾಂಗಳನ್ನು, ಸೇತುವೆಗಳನ್ನು ನಿರ್ಮಿಸಿ ಗ್ರಾಮ-ಗ್ರಾಮಗಳನ್ನು ಜೋಡಿಸುವಂತಹ ಕೆಲಸವನ್ನು ಮಾಡಲಾಗಿದೆ ಎಂದರು.
ಇದನ್ನ ಓದಿ: ಕುಡಿಯುವ ನೀರಿಗೆ ತುರ್ತು ವ್ಯವಸ್ಥೆ; ಪುರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ
ಹೊಸಂಗಡಿ ಅರಮನೆಯ (Hosangadi Palace) ಸುಕುಮಾರ್ ಶೆಟ್ಟಿ, ಜಿಲ್ಲಾ ಬಿಜೆಪಿ ಕಾರ್ಯಲಯ ಕಾರ್ಯದರ್ಶಿ ಸುಕೇಶ್ ಶೆಟ್ಟಿ (District BJP Office Secretary Sukesh Shetty), ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ (Former APMC President K. Krishnaraja Hegde), ಶಿರ್ತಾಡಿ ಗ್ರಾಪಂ ಸದಸ್ಯರಾದ ದೇವಕಿ, ರಾಜೇಶ್ ಫೆರ್ನಾಂಡಿಸ್, ಪುರಸಭಾ ಸದಸ್ಯೆ ಧನಲಕ್ಷ್ಮೀ, ನಾಮ ನಿರ್ದೇಶಿತ ಸದಸ್ಯ ದಿನೇಶ್ ಪೂಜಾರಿ, ಹೊಸಂಗಡಿ ಗ್ರಾ.ಪಂ.ಸದಸ್ಯ ಶ್ರೀಪತಿ ಭಟ್, ಮಾಜಿ ಅಧ್ಯಕ್ಷ ಹರಿಪ್ರಸಾದ್, ಸದಸ್ಯ ಶಂಕರ್ ಪೂಜಾರಿ, ಹೊಸಂಗಡಿ ಗೋಪಾಲಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕ ವೆಂಕಟ್ರಾಜ ಅಸ್ರಣ್ಣ, ಕಂದಿರು ದೇವಸ್ಥಾನದ ಆಡಳಿತ ಮೊಕ್ತೇಸರ (Kandiru temple administration Moktesara) ಸೋಮನಾಥ ಶಾಂತಿ, ಉದ್ಯಮಿ ಸುಕೇಶ್ ಕಂದೀರು, ಊರಿನ ಹಿರಿಯರಾದ ಮಂಜುನಾಥ ಶೇಷಗಿರಿ ಶೇಟ್, ಇಂಜಿನಿಯರ್ ರಾಕೇಶ್, ಗುತ್ತಿಗೆದಾರ ಗೋಕುಲ್ ಕುಂದಾಪುರ ಮತ್ತಿತರರು ಉಪಸ್ಥಿತರಿದ್ದರು.