ಮೂಡುಬಿದಿರೆ: ಆರೋಗ್ಯ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ನಡೆಸಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕವಾಗಿದೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ (Former Minister K. Abhayachandra Jain) ಹೇಳಿದರು.
ಮೂಡುಬಿದಿರೆ ಸಮಾಜ ಮಂದಿರದ ಶ್ರೀಗಣೇಶೋತ್ಸವದ (Sri Ganesh Festival) 60ನೇ ವರುಷದ ಅಂಗವಾಗಿ ಏರ್ಪಡಿಸಿರುವ ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರ (Blood donation camp) ಹಾಗೂ ವಿವಿಧ ಸೌಲಭ್ಯಗಳ ನೋಂದಣಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಿತಿಯ ಅಧ್ಯಕ್ಷ ಕೆ.ಶ್ರೀಪತಿ ಭಟ್ (K. Sripathy Bhatt) ಅಧ್ಯಕ್ಷತೆವಹಿಸಿದರು. ನಿರಂತರ ಸಮಾಜಮುಖೀ ಕಾರ್ಯಕ್ರಮಗಳನ್ನು ಆಯೋಜಿಸಿ, ಜನತೆಗೆ ಉಪಯುಕ್ತವಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಇದನ್ನ ಓದಿ: ಮೂಡಬಿದಿರೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ (Alwas Education Foundation) ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಉದ್ಯಮಿ ನಾರಾಯಣ ಪಿ.ಎಂ, ಮಿಥುನ್ ರೈ, ಜಯಶ್ರೀ ಅಮರನಾಥ ಶೆಟ್ಟಿ, ಡಾ.ಹನಾ ಉಪಸ್ಥಿತರಿದ್ದರು.
ಡಾ.ಅಶೋಕನ್ (Dr. Ashokan) ಶಿಬಿರದ ಉದ್ದೇಶ ತಿಳಿಸಿದರು. ರಾಜಾರಾಂ ಸ್ವಾಗತಿಸಿದರು. ಯತಿರಾಜ ಜೈನ್ ಕಾರ್ಯಕ್ರಮ ನಿರೂಪಿದರು.