ಮೂಡುಬಿದಿರೆ: ಪ್ರತೀ ವಸತಿ ಸಮುಚ್ಛಯಗಳ ನೀರನ್ನು (Water Preservation) ಅವರವರೇ ನಿರ್ವಹಣೆ ಮಾಡಬೇಕು. ಸಾರ್ವಜನಿಕ ಸ್ಥಳಕ್ಕೆ( Public places) ಬಿಡಬಾರದು. ಈ ನಿಯಮವನ್ನು ಉಲ್ಲಂಘಿಸುವ ವಸತಿ ಸಮುಚ್ಛಯಗಳ ವಿರುದ್ಧ ಕ್ರಮ ಕೈಗೊಳ್ಳಗಾಗುವುದು. ಡೋರ್ ನಂಬ್ರವನ್ನು ರದ್ದುಪಡಿಸಲಾಗುವುದು ಎಂದು ಅಧ್ಯಕ್ಷ ಪ್ರಸಾದ್ ಕುಮಾರ್(Prasad Kumar)ಹೇಳಿದರು.
ಪುರಸಭೆ ಕಾರ್ಯಾಲಯದಲ್ಲಿ ಸೋಮವಾರ(Monday) ನಡೆದ ಸಾಮಾನ್ಯ ಸಭೆಯಲ್ಲಿ ಕೊಳಚೆ ನೀರಿನ ಸಮಸ್ಯೆಗಳನ್ನು ಸದಸ್ಯರು ಪ್ರಸ್ತಾಪಿಸಿದಾಗ ಸೂಕ್ತ ಕ್ರಮದ ಭರವಸೆ ನೀಡಿದರು.
ಪೇಟೆಯಲ್ಲಿರುವ ಹಲವು ವಸತಿ ಸಂಕೀರ್ಣಗಳಿಂದ ಮಲಿನ ನೀರು(Polluted water)ಸಾರ್ವಜನಿಕ ರಸ್ತೆ ಸ್ಥಳಗಳಿಗೆ ಹರಿಯುತ್ತದೆ. ಇದರಿಂದ ಪರಿಸರ(Environment) ಮಾಲಿನ್ಯವುಂಟಾಗುತ್ತಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಸದಸ್ಯೆ ಸ್ವಾತಿ ಪ್ರಭು ಒತ್ತಾಯಿಸಿದರು. ರಾಜಕಾಲುವೆಗಳು ಒತ್ತುವರಿಯಾಗುತ್ತಿದೆ. ಇದರಿಂದ ನೀರು ಸರಾಗವಾಗಿ ಹರಿದು ಹೋಗಲು ಅಡಚಣೆಯಾಗುತ್ತಿದೆ. ಇದರ ಬಗ್ಗೆ ತುರ್ತು ಗಮನ ಹರಿಸಬೇಕು ಎಂದು ಸದಸ್ಯೆ ಸೌಮ್ಯ ಶೆಟ್ಟಿ ಪ್ರಸ್ತಾಪಿಸಿದರು.
ಪೇಟೆಯಲ್ಲಿರುವ ಖಾಸಗಿ ಸ್ಥಳಗಳು ನಿರ್ವಹಣೆಯಿಲ್ಲದೆ ಹುಲ್ಲು ಬೆಳೆಯುತ್ತದೆ. ಇಲ್ಲಿ ಹಾವುಗಳು ಓಡಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಸ್ಥಳಗಳ ನಿರ್ವಹಣೆ ಮಾಡುವಂತೆ ಸಂಬಧಪಟ್ಟವರಿಗೆ ಪುರಸಭೆ ನಿರ್ದೇಶನ ನೀಡಬೇಕು ಎಂದು ಸದಸ್ಯ ಪಿ.ಕೆ ಥೋಮಸ್ ಸಲಹೆ ನೀಡಿದರು.
ಪುರಸಭಾ(Purasabha) ವ್ಯಾಪ್ತಿಯಲ್ಲಿರುವ ಗೂಡಂಗಡಿಗಳು ಹಾಗೂ ಡಾಬಾಗಳಲ್ಲಿ ತಯಾರಾಗುವ ಆಹಾರಗಳು ಸುರಕ್ಷಿತವಾಗಿರುವುದರ ಬಗ್ಗೆ ಸಂಶಯವಿದೆ. ಇದನ್ನು ಪರಿಶೀಲನೆ ನಡೆಸುವುದು ಅಗತ್ಯ ಎಂದು ಪುರಸಭಾ ಸದಸ್ಯರು ಒತ್ತಾಯಿಸಿದರು. ಪುರಸಭೆಯಲ್ಲಿ ಆರೋಗ್ಯಾಧಿಕಾರಿ ಹುದ್ದೆ ಖಾಲಿಯಿದೆ. ಆದರೂ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಅಧ್ಯಕ್ಷರು ತಿಳಿಸಿದರು.
ಮೂಡುಬಿದಿರೆಯ ಮುಖ್ಯರಸ್ತೆ, ಮಸೀದಿ ರಸ್ತೆ, ವಿಜಯನಗರ, ಮಾರ್ಕೆಟ್ ರಸ್ತೆ ಮತ್ತಿತರ ಕಡೆಗಳಲ್ಲಿ ಫುಟ್‌ಪಾತ್‌ವರೆಗೆ ಅಂಗಡಿ ವಿಸ್ತರಿಸಿ ವ್ಯಾಪಾರ ನಡೆಸುವುದರಿಂದ ಪಾದಾಚಾರಿಗಳಿಗೆ ಓಡಾಡಲು ಕಷ್ಟವಾಗುತ್ತಿದೆ. ಈ ಬಗ್ಗೆ ಕ್ರಮಕೈಗೊಳ್ಳಬೇಕು. ಸ್ವರಾಜ್ಯ(Swarajya) ಮೈದಾನದ ಮಾರ್ಕೆಟ್ ನಲ್ಲಿ ಗುಜರಿ ಅಂಗಡಿಯಿದ್ದು ಸುತ್ತಮುತ್ತಲಿನ ಪ್ರದೇಶದಲ್ಲಿ ಗುಜರಿ ವಸ್ತುಗಳನ್ನು ರಾಶಿ ಹಾಕಿರುವುದರಿಂದ ಪರಿಸರ ಮಾಲಿನ್ಯವಾಗಿದೆ(Environment Pollution) ಎಂದು ಸದಸ್ಯ ರಾಜೇಶ್ ನಾಯ್ಕ್ ಗಮನ ಸೆಳೆದರು.
ಪುರಸಭೆ ವ್ಯಾಪ್ತಿಯ ಪೇಪರ್‌ಮಿಲ್, ಅಲಂಗಾರು ಹಾಗೂ ವಿದ್ಯಾಗಿರಿ(Vidyagiri)ಬಳಿ ಇರುವ ಸ್ವಾಗತಗೋಪುರಗಳು ಬಣ್ಣ ಕಳೆದುಕೊಂಡಿದೆ. ಅದರಲ್ಲಿರುವ ಮಾಹಿತಿಗಳನ್ನು ಸರಿಪಡಿಸಬೇಕು. ಪುರಸಭಾ ವ್ಯಾಪ್ತಿಯಲ್ಲಿರುವ ಬೀದಿ ದೀಪಗಳಿಗೆ ನಂಬರ್ ಹಾಕುವಂತೆ ಸದಸ್ಯೆ ಶ್ವೇತಾ ಪ್ರವೀಣ್ ಒತ್ತಾಯಿಸಿದರು.
ಫುಟ್‌ಪಾತ್ ಮೇಲೆ ಅಂಗಡಿ ಸಾಮಾಗ್ರಿಗಳನ್ನು ಇಡದಂತೆ ಸಂಬಂಧ ಪಟ್ಟವರಿಗೆ ಎಚ್ಚರಿಕೆ ನೀಡಲಾಗುವುದು. ಮತ್ತೆಯೂ ಪುನರಾವರ್ತನೆಯಾದಲ್ಲಿ ಅಂತಹ ಸೊತ್ತುಗಳನ್ನು ಮುಟ್ಟಗೋಲು ಹಾಕಲಾಗುವುದು ಎಂದು ಇಂಜಿನಿಯರ್(engineer) ಪದ್ಮನಾಭ ಉತ್ತರಿಸಿದರು.
ಮೂಡುಬಿದಿರೆ ಸ್ವಚ್ಛ ಪೇಟೆಯೆಂದು(Clea City) ಪುರಸಭೆ ಬಿಂಬಿಸುತ್ತಿದೆ. ಆದರೆ ಇಲ್ಲಿ ನಿರ್ವಹಣೆಯ ಲೋಪದ ಬಗ್ಗೆ ಸಾಮಾಜಿಕ ಜಾಲತಾಣ(Social Media) ಹಾಗೂ ಪತ್ರಿಕೆಗಳಲ್ಲಿ(Newspaper) ವರದಿ ಬರುತ್ತಿದೆ ಎಂದು ಸುರೇಶ್ ಕೋಟ್ಯಾನ್ ಸಹಿತ ಕೆಲವು ಸದಸ್ಯರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ವಾರದ ಆರುದಿನವೂ ಪೌರಕಾರ್ಮಿಕರು(Municipal Workers) ಸ್ವಚ್ಛತೆಯಲ್ಲಿ ತೊಡಗಿದ್ದಾರೆ. ಭಾನುವಾರ ರಜೆ ಇರುವ ಕಾರಣ ಆ ದಿನ ಮಾತ್ರ ವಿಲೇವಾರಿಯಾಗುತ್ತಿಲ್ಲ. ಆ ದಿನ ಸಂಗ್ರಹವಾಗುವ ಕಸದ ಚಿತ್ರಣವನ್ನೇ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಹರಿಯಬಿಟ್ಟಿದ್ದು ಇದರ ಹಿಂದೆ ಷಡ್ಯಂತ್ರ ಅಡಗಿದೆ ಎಂದರು.
ಉಪಾಧ್ಯಕ್ಷೆ ಸುಜಾತ ಶಶಿಧರ್, ಸ್ಥಾಯೀ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ ಉಪಸ್ಥಿತರಿದ್ದರು.