ಮೂಡುಬಿದಿರೆ: “ಜಯ-ವಿಜಯ” ಜೋಡುಕರೆ ಕಂಬಳ (Jaya Vijaya Jodukare Kambala)ಸಮಿತಿ ಪಣಪಿಲ ಇದರ ವತಿಯಿಂದ ನಡೆಯದ ಹದಿಮೂರನೇ ವರುಷದ ಕಿರಿಯ ವಿಭಾಗದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳವು ಭಾನುವಾರ ಸಂಜೆ ಸಂಪನ್ನಗೊಂಡಿತು.
ಇದನ್ನ ಓದಿ: ಪಣಪಿಲದಲ್ಲಿ ಜಯ -ವಿಜಯ ಜೋಡುಕರೆ ಕಂಬಳಕ್ಕೆ ಚಾಲನೆ
ಫಲಿತಾಂಶ : ಹಗ್ಗ ಕಿರಿಯ ವಿಭಾಗದಲ್ಲಿ 20ಜತೆ ಕೋಣಗಳು ಭಾಗವಹಿಸಿದ್ದು ಕಲ್ಯಾ ಹಾಳೆಕಟ್ಟೆ ನಿತೀಶ್ ಭವಿಷ್ಯ ದೇವಾಡಿಗ ಅವರ ಕೋಣಗಳು ಪ್ರಥಮ ( ಓಡಿಸಿದವರು: ಕಾವೂರು ದೋಟ ಸುದರ್ಶನ್), ಕೆಲ್ಲಪುತ್ತಿಗೆ ಪ್ರವೀಣ್ ಕುಮಾರ್ ದ್ವಿತೀಯ ( ಕೋಣ ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ).
ನೇಗಿಲು ಕಿರಿಯ ವಿಭಾಗದಲ್ಲಿ 57 ಜೊತೆ ಕೋಣಗಳು ಭಾಗವಹಿಸಿದ್ದು ಪಡು ಕೂಡೂರು ಪಠೇಲರ ಮನೆ ಭಾರವಿ ಶೆಟ್ಟಿ (Bharavi Shetty is the home of Padu Kudur Patel) -ಪ್ರಥಮ ( ಕೋಣ ಓಡಿಸಿದವರು: ಮೂಡುಬಿದಿರೆ ಒಂಟಿಕಟ್ಟೆ ರಿತೇಶ್), ಪನೋಲಿ ಬೈಲು ಬೊಳ್ಳಾಯಿ ಚೇತನ ಚಂದಪ್ಪ ಪೂಜಾರಿ – ದ್ವಿತೀಯ ( ಓಡಿಸಿದವರು : ಪಣಪಿಲ ಪ್ರವೀಣ್ ಕೋಟ್ಯಾನ್).
ಸಬ್ ಜ್ಯೂನಿಯರ್ ನೇಗಿಲು ಕಿರಿಯ ವಿಭಾಗದಲ್ಲಿ 75 ಜೊತೆ ಕೋಣಗಳು ಭಾಗವಹಿಸಿದ್ದು ಗಿರಿಜ ರೋಡ್ ಲೈನ್ಸ್ ಕೋಟ ಗಾಡಿ ಕೂಸ ಪೂಜಾರಿ (Girija Road Lines Kota Gadi Kusa Pujari) -ಪ್ರಥಮ (ಓಡಿಸಿದವರು: ಭಟ್ಕಳ ಹರೀಶ್), ವಾಲ್ಪಾಡಿ ಹಾಲಾಜೆ ಲೂಯಿಸ್ ಲಾರೆನ್ಸ್ ಸಲ್ದಾನ – ದ್ವಿತೀಯ (ಓಡಿಸಿದವರು : ವಿಶ್ವನಾಥ ದೇವಾಡಿಗ). ಕೊನೆಯ ಕಂಬಳದಲ್ಲಿ ಒಟ್ಟು 152 ಜತೆ ಕೋಣಗಳು ಭಾಗವಹಿಸಿ ಗಮನ ಸೆಳೆದವು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಸನ್ಮಾನಿಸಿ ಬಹುಮಾನವನ್ನು ವಿತರಿಸಲಾಯಿತು. ವಿಜೇತ ಕೋಣಗಳಿಗೆ ಚಿನ್ನದ ಪದಕದೊಂದಿಗೆ ಗೌರವಿಸಲಾಯಿತು. ಶಿರ್ತಾಡಿ ಘಟಕದ ಉಪವಲಯಾರಣ್ಯಧಿಕಾರಿ ಕಾವ್ಯಶ್ರೀ (Sub Zonal Forest Officer Kavyashree), ಅಳಿಯೂರು ಕಂಬಳ ಸಮಿತಿಯ ಅಧ್ಯಕ್ಷ ಯುವರಾಜ್ ಹೆಗ್ಡೆ ನಂದೊಟ್ಟು, ಕಾರ್ಯಧ್ಯಕ್ಷ ಸುಭಾಶ್ಚಂದ್ರ ಚೌಟ, ಮಜಲೋಡಿಗುತ್ತು ಪ್ರಮೋದ್ ಆರಿಗ,ಪ್ರವೀಣ್ ಭಟ್ ಕಾನಂಗಿ, ಪ್ರಶಾಂತ್ ಶೆಟ್ಟಿ ಮೇಗಿನಮನೆ, ವಿಜಯಕುಮಾರ್ ಕಂಗಿನ ಮನೆ, ಮಹಾವೀರ ಜೈನ್, ಅಶ್ವತ್ಥ್ ಕೆಲ್ಲಪುತ್ತಿಗೆ, ಕಂಬಳ ಸಮಿತಿಯ ಉಪಾಧ್ಯಕ್ಷರುಗಳಾದ ರಮನಾಥ ಸಾಲ್ಯಾನ್, ರವಿ ಪೂಜಾರಿ, ಪ್ರವೀಣ್ ಕೋಟ್ಯಾನ್, ಜೊತೆ ಕಾರ್ಯದರ್ಶಿ ಯೋಗೀಶ್ ನಂದೊಟ್ಟು, ಕೋಶಾಧಿಕಾರಿ ಜಯಚಂದ್ರ ಎನ್ ಸದಸ್ಯ ಸಚಿನ್ ಪಣಪಿಲ,ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಅಶ್ವತ್ಥ್ ಪಣಪಿಲ ಕಾರ್ಯಕ್ರಮ ನಿರೂಪಿಸಿದರು.