ಮೂಡಬಿದಿರೆ: ಕರ್ನಾಟಕ ಬ್ಯಾಂಕ್ ಶತಮಾನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಕೆ. ವಿ. ರಮಣ್ ಮಂಗಳೂರು ಪರಿಕಲ್ಪನೆ – ಸಾಹಿತ್ಯದ “ಸಹ ಯಾನದ ಮಾನ” (Value of companionship) – ಶತಮಾನ ಗೀತೆಯನ್ನು ನೃತ್ಯ ಪ್ರದರ್ಶನದ ಮೂಲಕ ಲೋಕಾರ್ಪಣೆ ಮಾಡಲಾಯಿತು. ವ್ಯಾಪಕ ಮೆಚ್ಚುಗೆ ಗಳಿಸಿದ ಈ ಸಾಹಿತ್ಯ- ಸಂಗೀತ ಸಂಭ್ರಮವು ನೃತ್ಯದೊಂದಿಗೆ ಮುಪ್ಪುರಿಗೊಂಡಿತು.
ಇದನ್ನ ಓದಿ: Karnataka Bank: ಕರ್ಣಾಟಕ ಬ್ಯಾಂಕ್ ಶತಮಾನೋತ್ಸವ ಸಂಭ್ರಮ
ಸನಾತನ ನಾಟ್ಯಾಲಯದ (Sanatana Natyalaya) ಕರ್ನಾಟಕ ಕಲಾಶ್ರೀ ವಿದುಷಿ ಶಾರದ ಮಣಿ ಶೇಖರ್ (Karnataka Kalashree Vidushi Sharada Mani Shekhar) ಶಿಷ್ಯರು ವಿದುಷಿ ಶ್ರೀಲತಾ ನಾಗರಾಜ್ ಸಂಯೋಜನೆಯಲ್ಲಿ ನರ್ತಿಸಿದರು. ಚಂದ್ರಶೇಖರ್. ಕೆ. ಶೆಟ್ಟಿ (Chandrasekhar. K. Shetty)ಸಹಕರಿಸಿದರು.