ಮೂಡುಬಿದಿರೆ: ಕೋಟೆಬಾಗಿಲು ಶ್ರೀ ಮಹಮ್ಮಾಯಿ ದೇವಸ್ಥಾನದ (Sri Mahammai Temple) ಎರಡು ದಿನಗಳ ವಾರ್ಷಿಕ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆದು ಬುಧವಾರ ಮುಕ್ತಾಯಗೊಂಡಿತು.
ಮಂಗಳವಾರ ಬೆಳಗ್ಗೆ ವೀರಮಾರುತಿ ದೇವಸ್ಥಾನದ (Veeramaruti Temple) ಬಳಿಯ ಪುರಾತನ ಕಟ್ಟೆಯಲ್ಲಿ ಮಹಮ್ಮಾಯಿ ಬೊಂಬೆಯನ್ನು ಪ್ರತಿಷ್ಠಾಪಿಸಿದ ಬಳಿಕ ದೇವಿಯ ದರ್ಶನ ನಡೆಯಿತು. ಮಧ್ಯಾಹ್ನ ಸಾರ್ವಜನಿಕ ಸತ್ಯನಾರಾಯಣ ಪೂಜೆ (Public Satyanarayan Puja) ಜರಗಿತು. ರಾತ್ರಿ ದರ್ಶನ ಸಮೇತ ವಿವಿದ ಬಿರುದಾವಳಿಗಳೊಂದಿಗೆ ಬೊಂಬೆಯನ್ನು ಕಟ್ಟೆಯಿಂದ ಕ್ಷೇತ್ರಕ್ಕೆ ವೈಭವದ ಮೆರವಣಿಗೆಯೊಂದಿಗೆ (A glorious procession) ಬರಮಾಡಿಕೊಳ್ಳಲಾಯಿತು. ನಂತರ ದೇವಿ ಉಚ್ಚಂಗಿ ದರ್ಶನ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಮಣಿ ಕೋಟೆಬಾಗಿಲು ರಚಿಸಿದ `ಭರಣಿ ಕೃತಿಕೆ’ ತುಳು ನಾಟಕ (Bharani Kritike Tulu play) ಪ್ರದರ್ಶನಗೊಂಡಿತು.
ಇದನ್ನ ಓದಿ: ಬೆಳಗೊಳ ಕರ್ಮ ಯೋಗಿ ಶ್ರೀಗಳಿಗೆ ಮೂಡುಬಿದಿರೆಯಲ್ಲಿ ವಿನಯಾಂಜಲಿ ಪೂಜೆ
ಬುಧವಾರ ಬೆಳಿಗ್ಗೆ ನಾರಂಪಾಡಿಗುತ್ತು ಮನೆಯಿಂದ ಭಂಡಾರ ಆಗಮನ, ಸಾಯಂಕಾಲ ಶ್ರೀ ಮೈಸಂದಾಯ ಮತ್ತು ಪಿಲಿಚಾಮುಂಡಿ ದೈವಗಳ ಕೋಲ, ದರ್ಶನ ಬಳಿಕ ಮೆರವಣಿಗೆಯಲ್ಲಿ ತೆರಳಿ ಮಹಮ್ಮಾಯಿ ಬೊಂಬೆಯನ್ನು ವಿಸರ್ಜಿಸಲಾಯಿತು. ದೇವಸ್ಥಾನದ ಮೊಕ್ತೇಸರ ನಾರಂಪಾಡಿಗುತ್ತು ಸೇಸಪ್ಪ ಹೆಗ್ಡೆ (Moktesara Narampadiguthu Sesappa Hegde), ಮಹಮ್ಮಾಯಿ ಸೇವಾ ಸಮಿತಿ ಅಧ್ಯಕ್ಷ ರಾಜೇಶ್ ಕೋಟೆಗಾರ್, ಕರ‍್ಯದರ್ಶಿ ಹರೀಶ್ಚಂದ್ರ ಹೆಗ್ಡೆ, ಗೌರವ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಹವಾಲ್ದಾರ್ ಆನಂದ ಕುಮಾರ್ (Havaldar Anand Kumar) ಮತ್ತಿತರರು ಪಾಲ್ಗೊಂಡಿದ್ದರು.