ಮೂಡುಬಿದಿರೆ: ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ (Sri Guru Math Kalikamba Temple) ಕಾಳಿಕಾಂಬಾ ಮಹಿಳಾ ಸಮಿತಿಯ ವತಿಯಿಂದ ದೇವರ ಪ್ರೀತ್ಯಾರ್ಥವಾಗಿ ಲಕ್ಷ ಕುಂಕುಮಾರ್ಚನೆ (Laksh Kumkumarchane) ಶುಕ್ರವಾರ ನಡೆಯಿತು.
ಕ್ಷೇತ್ರದ ಪ್ರಧಾನ ತಂತ್ರಿ ಕೇಶವ ಆಚಾರ್ಯ ಪುರೋಹಿತ್ (Principal Tantri Kesava Acharya Purohit) ಆಚಾರ್ಯತ್ವದಲ್ಲಿ ನಡೆದ ಈ ಧಾರ್ಮಿಕ ಕರ‍್ಯಕ್ರಮದಲ್ಲಿ ಶಂಕರಾಚಾರ್ಯ ಕಡ್ಲಾಸ್ಕರ್ ಲಕ್ಷ ಕುಂಕುಮಾರ್ಚನೆಯ ಮಹತ್ವವನ್ನು ತಿಳಿಸಿದರು.
ಇದನ್ನ ಓದಿ: ಕೋಟೆಬಾಗಿಲು ಮಹಮ್ಮಾಯಿ ದೇವಸ್ಥಾನದ ಜಾತ್ರಾ ಮಹೋತ್ಸವ
ಕ್ಷೇತ್ರದ ಆಡಳಿತ ಮೊಕೇಸರ ಜಯಕರ ಆಚಾರ್ಯ ಪುರೋಹಿತ್ (Administration Mokesara Jayakara Acharya Purohit) , ಮೊಕ್ತೇಸರರಾದ ಬಾಲಕೃಷ್ಣ ಆಚಾರ್ಯ ಉಳಿಯ, ಶಿವರಾಮ ಆಚಾರ್ಯ ಉಳಿಯ, ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷೆ ಸುಜಾತ ಬಾಲಕೃಷ್ಣ ಆಚಾರ್ಯ (Sujata Balakrishna Acharya), ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಹರಿಶ್ಚಂದ್ರ ಆಚಾರ್ಯ ತಾಕೋಡೆ ಮತ್ತಿತರರು ಉಪಸ್ಥಿತರಿದ್ದರು. ಸಾವಿರಕ್ಕೂ ಅಧಿಕ ಮಂದಿ ಮಹಿಳೆಯರು ಕುಂಕುಮಾರ್ಚನೆಯಲ್ಲಿ ಪಾಲ್ಗೊಂಡರು.