ಮೂಡುಬಿದಿರೆ: ಇಲ್ಲಿಗೆ ಸಮೀಪದ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಮಾ. 22ರಿಂದ ಏ. 1ರ ವರೆಗೆ ಶ್ರೀರಾಮ ನವಮಿ ಮಹೋತ್ಸವ ನಡೆಯಲಿದೆ.
ಮಾ. 22ರಂದು ಧ್ವಜಾರೋಹಣ ನಡೆಯಲಿದ್ದು ಪ್ರತಿದಿನ ಪುರಾಣ ಪಾರಾಯಣ (Purana Parayana), ವಿಶೇಷ ಪೂಜೆ, ಸಂಜೆ ಹರಿಕಥೆ, ಭಜನೆ ಪಲ್ಲಕಿ (Bhajan Pallaki) ಹಾಗೂ ವಾಹನೋತ್ಸವ ನಡೆಯಲಿದೆ.
ಮಾ. 30ರಂದು ಮಧ್ಯಾಹ್ನ ಶ್ರೀರಾಮ ಜನ್ಮೋತ್ಸವ (Shriram Janmatsavam), ರಾತ್ರಿ ಪುಷ್ಪರಥೋತ್ಸವ, 31ರಂದು ಬ್ರಹ್ಮರಥೋತ್ಸವ ನಡೆಯಲಿದೆ.
ಇದನ್ನ ಓದಿ: ಕೋಟಿ ಚೆನ್ನಯ ಯುವಶಕ್ತಿ ಮತ್ತು ಕೋಟಿ ಚೆನ್ನಯ ಮಹಿಳಾ ಘಟಕದ ದಶಮಾನೋತ್ಸವ
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮಾ.30ರಂದು ಸಂಜೆ 6ರಿಂದ ಬೆಂಗಳೂರು ಕೋಣನಕುಂಟೆ ಶ್ರೀಶರ್ಮ ಮ್ಯೂಸಿಕ್ ಅಕಾಡೆಮಿ (Konanakunte Srisharma Music Academy) ಕಲಾವಿದರಿಂದ ಸಂಗೀತ, 31ರಂದು ಸಂಜೆ 7ರಿಂದ ಬೆಂಗಳೂರು ಚಿಗುರು ನೃತ್ಯ ಕುಟೀರ ಕಲಾವಿದರಿಂದ ನೃತ್ಯವೈಭವ ನಡೆಯಲಿದೆ ಎಂದು ಶ್ರೀದೇವಸ್ಥಾನದ ಪ್ರಕಟಣೆ ತಿಳಿಸಿದೆ.