ಮೂಡುಬಿದಿರೆ: ಗಣೇಶೋತ್ಸವ ಸಂದರ್ಭದಲ್ಲಿ ವೇಷ ಧರಿಸಿ ಪುಟ್ಟ ಕಂದಮ್ಮ ಶ್ರೇಯಾಳ ಚಿಕಿತ್ಸೆಯ ವೆಚ್ಚಕ್ಕಾಗಿ ಜವನೆರ್ ಬೆದ್ರ ಯುವ ಸಂಘಟನೆ ಆಶ್ರಯದಲ್ಲಿ ಮೂಡುಬಿದಿರೆ ವಿದ್ಯಾರ್ಥಿಗಳು ನಿಯುತ್ ತಂಡದ ಸದಸ್ಯರಾದ, ತೇಜಸ್, ಧೀರಜ್, ಮುರುಳಿ, ಸದಾಶಿವ, ಕಿಶನ್, ರಕ್ಷಾ, ಶ್ರಮಿಕ ಹಾಗೂ ಯಕ್ಷಿತಾ ಧನ ಸಂಗ್ರಹ ಮಾಡಿದರು.
ಮೂಡುಬಿದಿರೆಯ ಸ್ವರಾಜ್ಯ ಮೈದಾನದ ಬಳಿಯ ಕ್ಯಾನ್ಸರ್ ಪೀಡಿತ ಒಂದುವರೆ ವರ್ಷದ ಮಗು ಶ್ರೇಯಾಳಿಗೆ ಸೆ.4ರಂದು ಮೂಡಬಿದ್ರೆಯ ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ 5ಯುವಕರು ವೇಷ ಧರಿಸಿ, 1,03,542/- ಧನ ಸಂಗ್ರಹಿಸಿದರು.
ಸಂಗ್ರಹಿಸಿದ ಹಣವನ್ನು ಶ್ರೇಯಾಳ ಕುಟುಂಬಕೆ ಜವನೆರ್ ಬೆದ್ರದ ಕಚೇರಿಯಲ್ಲಿ ಸೆ.6ರಂದು ಜವನೆರ್ ಬೆದ್ರದ ಸಂಘಟನೆಯ ಅಧ್ಯಕ್ಷರು ಅಮರ್ ಕೋಟೆ, ಪ್ರಮುಖರುಗಳಾದ ನಾರಾಯಣ ಪದುಮಲೆ, ಮನು ಆಚಾರ್ಯ ಹಾಗೂ ಸದಸ್ಯರ ಸಮ್ಮುಖದಲ್ಲಿ ನಿಯುತ್ ಸದಸ್ಯರು ಹಸ್ತಾಂತರಿಸಿದರು.