ಮೂಡುಬಿದಿರೆ: ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಕಾರ್ಯಕ್ರಮವನ್ನು ಉದ್ಯಮಿ ಸತ್ಯಪ್ರಕಾಶ್ ಹೆಗ್ಡೆ ಶನಿವಾರ ಸಮಾಜ ಮಂದಿರದಲ್ಲಿ ಉದ್ಘಾಟಿಸಿದರು.
ಜಿಲ್ಲಾ ಆಶಿತಾ ರೋಗವಾಹಕ ನಿಯಂತ್ರಣಾಧಿಕಾರಿಗಳ (District Ashita Disease Control Officer) ಕಚೇರಿಯ ಮಂಜುಳಾ ಅವರು ಡೆಂಗ್ಯೂ, ಮಲೇರಿಯಾ ಬಗ್ಗೆ ಮಾಹಿತಿ ನೀಡಿದರು. ಮಳೆಗಾಲದಲ್ಲಿ ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳಿಂದ ಡೆಂಗ್ಯೂ ಅಥವಾ ಮಲೇರಿಯಾ (Dengue or Malaria) ಹಾಗೂ ಚಿಕೂನ್ ಗೂನ್ಯದಂತಹ ರೋಗಗಳು ಕಂಡು ಬರುತ್ತವೆ. ಆದ್ದರಿಂದ ಸಿಯಾಳ, ಟಯರ್ ತೆರೆದ ನೀರಿ ಟ್ಯಾಂಕ್ ಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಜಾಗೃತರಾಗಬೇಕು. ಈ ಬಗ್ಗೆ ಜನರಿಗೆ ಮಾಹಿತಿಗಳನ್ನು ನೀಡುವಂತ್ತಾಗಬೇಕು ಎಂದರು.
ರೋಗಗಳ ಬಗ್ಗೆ ಬಿತ್ತಿಪತ್ರದ ಮೂಲಕ ಜಾಗೃತಿ ಮೂಡಿಸಲಾಯಿತು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್, ಜಿಲ್ಲಾ ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರದೀಪ್ ಕುಮಾರ್, ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಶಾಂತಮ್ಮ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ (Field Health Education Officer) ಸುಶೀಲಾ ಸ್ವಾಗತಿಸಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಸಮುದಾಯ ಆರೋಗ್ಯದಿಂದ ನಡೆದ ಜಾಗೃತಿ ಅಭಿಯಾನವನ್ನು ಆರೋಗ್ಯಾಧಿಕಾರಿ ಡಾ.ಚಿತ್ರಾ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು.
ಇದನ್ನ ಓದಿ: ಒತ್ತಡಮುಕ್ತ ಕಲಿಕೆಯಿಂದ ಯಶಸ್ಸು: ನ್ಯಾ. ಎಸ್. ಅಬ್ದುಲ್ ನಜೀರ್
ಡೆಂಗ್ಯೂ ಕುರಿತಾದ ಮುಂಜಾಗೃತ ಕ್ರಮವಾಗಿ ಏರ್ಪಡಿಸಿದ್ದ ಚಿತ್ರಕಲೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ಪ್ರತಿಜ್ಞಾ, ಕೀರ್ತಿ, ಅನ್ನಾ ಥಾಮಸ್, ಅಜ್ಮೋ0ಳ್, ಪ್ರಸನ್ನ ಕುಮಾರ್ ಬರ್ಕಿ,ಸ್ಟೆಫಿ, ಅಮೋಘ ಆರ್,ರಿಚಾ ಅನ್ನಾ ಸಾಬು ಅವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ದ.ಕ.ಜಿಲ್ಲೆ (Zilla Panchayat D.K.Dist), ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (District Health and Family Welfare Department), ಜಿಲ್ಲಾ ಆಶ್ರಿತ ರೋಗವಾಹಕ ನಿಯಂತ್ರಣಾಧಿಕಾರಿಗಳ ಕಚೇರಿ ಮಂಗಳೂರು, ಸಮುದಾಯ ಆರೋಗ್ಯ ಕೇಂದ್ರ ಮೂಡುಬಿದಿರೆ, ಪುರಸಭೆ, ನೇತಾಜಿ ಬ್ರಿಗೇಡ್ ಹಾಗೂ ಜವನೆರ್ ಬೆದ್ರ, ಸಹಯೋಗದಲ್ಲಿ ನಡೆಯಿತು.