ಮೂಡುಬಿದಿರೆ: ಪುತ್ತಿಗೆ ನೆಲ್ಲಿಗುಡ್ಡೆ ಮಿತ್ರ ಮಂಡಳಿ (Puttige Nelligudde Mitra Board) ಆಶ್ರಯದಲ್ಲಿ 39ನೇ ವರ್ಷದ ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ (Satyanarayan Puja) ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನೆಲ್ಲಿಗುಡ್ಡೆ ಸುಬ್ಬಯ್ಯಕಟ್ಟೆಯಲ್ಲಿ (Subbaiyakatte) ನಡೆಯಿತು.
ಪುತ್ತಿಗೆಮಠ ಲಕ್ಷ್ಮಿನಾರಾಯಣ ಅವರ ಪೌರೋಹಿತ್ಯದಲ್ಲಿ ಸತ್ಯನಾರಾಯಣ ಪೂಜೆ ನಡೆಯಿತು. ಬಳಿಕ ಸಂಘದ ಅಧ್ಯಕ್ಷ ಪ್ರಶಾಂತ್ ಭಂಡಾರಿ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು.
ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ (Puttige Sri Somanatheshwar Temple) ಆಡಳಿತ ಮೊಕ್ತೇಸರ, ಮೂಡುಬಿದಿರೆ ಚೌಟರ ಅರಮನೆ ಕಲದೀಪ ಎಂ. ಕಾರ್ಯಕ್ರಮ ಉದ್ಘಾಟಿಸಿದರು.
ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ (KP Sucharita Shetty is the President of DK District Milk Producers Union) , ಹಿರಿಯ ವೈದ್ಯ ಪಿ.ಪದ್ಮನಾಭ ಉಡುಪ, ಪುತ್ತಿಗೆ ಗ್ರಾಪಂ ಸದಸ್ಯರಾದ ಚಂದ್ರಶೇಖರ್ ನಾಯ್ಕ್, ಸುಮಾ ಭಟ್, ಗ್ರೆಟ್ಟಾ ಮಸ್ಕರೇನಸ್, ಮಾಜಿ ಅಧ್ಯಕ್ಷ ಶಶಿಧರ ಪಿ.ನಾಯಕ್, ನೆಲ್ಲಿಗುಡ್ಡೆ ಅಯ್ಯಪ್ಪ ಸೇವಾ ಸಮಿತಿಯ (Nelligudde Ayyappa Seva Samiti) ಅಧ್ಯಕ್ಷ ಗಣೇಶ್.ಜಿ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪೂರ್ಣಾಂಕ ಪಡೆದ ಪುತ್ತಿಗೆ ಗ್ರಾಮದ ಶ್ರೀಜಾ ಹೆಬ್ಬಾರ್, ವೈದ್ಯಕೀಯ ಕ್ಷೇತ್ರದ 7 ದಶಕಗಳ ಸೇವೆಗಾಗಿ ಡಾ.ಪಿ ಪದ್ಮನಾಭ ಉಡುಪ, ಜನರಲ್ ಸರ್ಜರಿಯಲ್ಲಿ ಚಿನ್ನದ ಪದಕ ವಿಜೇತೆ ಸುಪ್ರಿತಾ ಎಸ್.ಕರ್ಮರನ್, ಕರ್ನಾಟಕ ಜಾನಪದ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತ ಕರಗನೃತ್ಯ ಕಲಾವಿದ ವೆಂಕಟೇಶ್ ಬಂಗೇರ (Artist Venkatesh Bangera) ಅವರನ್ನು ಸನ್ಮಾನಿಸಲಾಯಿತು. ಮೆಸ್ಕಾಂ ಪುತ್ತಿಗೆ ವಿಭಾಗದ ನೌಕರರಾದ ಯಶವಂತ್, ಸಿದ್ಧರಾಮ, ಗುರು, ಶಶಿಧರ್ ಅವರನ್ನು ಗೌರವಿಸಲಾಯಿತು. ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿಜೇತರಾದ ಪುತ್ತಿಗೆ ಹಿರಿಯ ಪ್ರಾಥಮಿಕ ಶಾಲೆಯ (Puttige Senior Primary School) ವಿದ್ಯಾರ್ಥಿನಿಯರನ್ನು ಪುರಸ್ಕರಿಸಲಾಯಿತು. ಉನ್ನತ ವ್ಯಾಸಂಗಕ್ಕಾಗಿ ಸ್ಥಳೀಯ ವಿದ್ಯಾರ್ಥಿಗೆ ರೂ.10 ಸಾವಿರ ಧನ ಸಹಾಯ ಮಾಡಲಾಯಿತು.
ಸಂಘದ ಕೋಶಾಧಿಕಾರಿ ಸಂಜೀವ ನಾಯ್ಕ್ (Treasurer Sanjiva Naik) ಸ್ವಾಗತಿಸಿದರು, ಸುರಕ್ಷಾ, ಪ್ರಶಾಂತ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಮಾನ್ಯ, ಪೂರ್ಣಿಮಾ, ಸಾನಿಕ ಸನ್ಮಾನಪತ್ರ ವಾಚಿಸಿದರು.