News Karnataka
ಸಿಟಿಜನ್ ಕಾರ್ನರ್

ಕಲ್ಲಬೆಟ್ಟುವಿನಲ್ಲಿ ಮದ್ಯದಂಗಡಿ ತೆರೆಯದಂತೆ ಜನಜಾಗೃತಿ ಮನವಿ

Public Awarness appeal not to open liquor shop in kallabett
Photo Credit : News Karnataka

ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಕಲ್ಲಬೆಟ್ಟುವಿನಲ್ಲಿ (Kallabettu) ಸ್ಥಾಪಿಸಲು ಉದ್ದೇಶಿಸಿರುವ ಮದ್ಯದಂಗಡಿ ವಿರುದ್ಧ ಸ್ಥಳೀಯ ದಲಿತ ಸಂಘರ್ಷ ಸಮಿತಿ (Dalit Conflict Committee) ಮತ್ತು ಸಾರ್ವಜನಿಕರ ದೂರಿನ ಮೇರೆಗೆ ಬುಧವಾರ ಜನಜಾಗೃತಿ ವೇದಿಕೆಯ (Public awareness platform) ಪದಾಧಿಕಾರಿಗಳು ಮತ್ತು ಯೋಜನೆಯ ಪದಾಧಿಕಾರಿಗಳ ಸಭೆಯನ್ನು ವಲಯ ಕಚೇರಿಯಲ್ಲಿ ನಡೆಸಿದರು.

ಕಲ್ಲಬೆಟ್ಟುವಿನಲ್ಲಿ (Kallabettu) ಈಗಾಗಲೇ ಅನಧಿಕೃತ ಮದ್ಯ ಮಾರಾಟ ವ್ಯಾಪಕವಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಬಕಾರಿ ಇಲಾಖೆಗೆ ಸೂಚಿಸುವುದು ಮತ್ತು ಅನಧಿಕೃತ ಮದ್ಯ ಮಾರಾಟವನ್ನು ತಡೆಯುವುದು ಎಂದು ನಿರ್ಧರಿಸಲಾಯಿತು. ಪ್ರಸ್ತಾವಿತ ಮದ್ಯದಂಗಡಿಗೆ ಪರವಾನಿಗೆ ನೀಡದಂತೆ ಅಬಕಾರಿ ಇಲಾಖೆಗೆ ಭೇಟಿ ಕೊಟ್ಟು ಅಬಕಾರಿ ನಿರೀಕ್ಷಕರನ್ನು (Inspector of Excise) ಸಂಪರ್ಕಿಸಿ ಮನವಿ ಸಲ್ಲಿಸುವುದು ಹಾಗೂ ಜಿಲ್ಲಾಧಿಕಾರಿಗಳಲ್ಲಿ ಈ ಕುರಿತಾಗಿ ತಿಳಿಸುವುದು, ಮದ್ಯದಂಗಡಿ ಸ್ಥಾಪನೆ ಮಾಡುವಂತಹ ಈ ಸ್ಥಳದಲ್ಲಿ ಕಾಲೇಜು ಹತ್ತಿರದಲ್ಲಿದೆ.

ಸುಮಾರು 70ಕ್ಕೂ ಹೆಚ್ಚು ಮಂದಿ ಇರುವ ದಲಿತ ಕುಟುಂಬಗಳಿವೆ. ವಿದ್ಯಾರ್ಥಿಗಳ ವಸತಿ ನಿಲಯಗಳಿವೆ. ಪ್ರದೇಶದಲ್ಲಿ ದೇವಸ್ಥಾನ, ಶಾಲೆ, ಸೆಂಟ್ರಲ್ ಸ್ಕೂಲ್ ಮತ್ತು ಹಲವಾರು ಮಹಿಳೆಯರು ಮತ್ತು ಹಾದು ಹೋಗುವಂತಹ ಸ್ಥಳವಾಗಿದೆ. ಮದ್ಯದಂಗಡಿಯಿಂದಾಗಿ ಇಲ್ಲಿ ಭಯ ಭೀತಿ ಹಾಗೂ ಶಾಂತಿಭಂಗದಂತಹ ವಾತಾವರಣ ಸೃಷ್ಟಿಯಾಗುವುದು. ಇದನ್ನು ನಿಲ್ಲಿಸಬೇಕೆಂದು ಸ್ಥಳೀಯರ ಮನವಿಯ ಮೇರೆಗೆ ಜನಜಾಗೃತಿ ವೇದಿಕೆಯವರು ಪರವಾನಿಗೆ ನೀಡದಂತೆ ಅಬಕಾರಿ ಇಲಾಖೆಗೆ(Department of Excise) ತಿಳಿಸಿ ಒಂದು ವೇಳೆ ಇದಕ್ಕೆ ಮೇಲು ಪರವಾನಿಗೆ ನೀಡಿದ್ದಲ್ಲಿ ಸ್ಥಳೀಯರು ಉದ್ದೇಶಿಸಿರುವ ಯಾವುದೇ ಕಾನೂನು ರೀತಿಯ ಹೋರಾಟಕ್ಕೆ ವೇದಿಕೆ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ನಿರ್ಣಯಿಸಲಾಯಿತು.

ವೇದಿಕೆಯ ತಾಲೂಕು ಅಧ್ಯಕ್ಷ ಸುಭಾಶ್ಚಂದ್ರ ಚೌಟ, ವಲಯಾಧ್ಯಕ್ಷ ಜೋಸ್ಸಿ ಮೆನೆಜಸ್, ದಿನೇಶ್, ವಾಸುದೇವ, ಜಗತ್ಪಾಲ ಹೆಗ್ಡೆ, ಲಕ್ಷಣ ಸುವರ್ಣ, ಪ್ರಾದೇಶಿಕ ನಿರ್ದೇಶಕ ವಿವೇಕ ವಿ., ಯೋಜನೆಯ ನಿರ್ದೇಶಕ ಸತೀಶ್ ಶೆಟ್ಟಿ, ಯೋಜನಾಧಿಕಾರಿ ನಾರಾಯಣ ಶೆಟ್ಟಿ, ತಿಮ್ಮಯ್ಯ ನಾಯ್ಕ, ಮೇಲ್ವಿಚಾರಕಿ ಮಮತಾ ಮತ್ತು ಒಕ್ಕೂಟದ ಪದಾಧಿಕಾರಿಗಳು, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಪಾಂಡೇಶ್ವರ ಉಪಸ್ಥಿತರಿದ್ದರು.

ಇದನ್ನ ಓದಿ: ರಾಷ್ಟ್ರೀಯ ಹೆದ್ದಾರಿ 169 ಭೂ ಸಂತ್ರಸ್ತರ ಸಭೆ; ಮಾ.7ರಂದು ಡಿಸಿ ಕಚೇರಿ ಎದುರು ಪ್ರತಿಭಟನೆ

ಬಳಿಕ ಅಬಕಾರಿ ನಿರೀಕ್ಷಕ ವಿಶ್ವನಾಥ ಪೈ (Excise Inspector Vishwanath Pai) ಅವರಿಗೆ ಮನವಿ ಸಲ್ಲಿಸಲಾಯಿತು.

 

News Karnataka

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *