ಮೂಡುಬಿದಿರೆ: ಇಲ್ಲಿನ 18 ಬಸದಿಗಳಲ್ಲೊಂದಾದ(Basadi Temple) ಹಿರೇ ಅಮ್ಮನವರ ಬಸದಿಯನ್ನು ಸುಮಾರು ಒಂದು ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಲಾಗುತ್ತಿದ್ದು ಶನಿವಾರ ದೇವರ ವಿಗ್ರಹಗಳನ್ನು ಬಾಲಾಲಯದಲ್ಲಿ(Balalaya) ಪ್ರತಿಷ್ಠಾಪಿಸುವ ಮೂಲಕ ಚಾಲನೆ ನೀಡಲಾಯಿತು.
ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜವರ್ಮ ಬೈಲಂಗಡಿ(Rajavarma Bailangadi) ಜೀರ್ಣೋದ್ಧಾರದ ಅವಧಿಯಲ್ಲಿ ಪದಾಧಿಕಾರಿಗಳು ಅನುಸರಿಸಬೇಕಾದ ವಿಧಿನಿಯಮಗಳ ವಿವರ ನೀಡಿ ನಿಗದಿತ ಅವಧಿಯಲ್ಲಿ ಕಾರ‍್ಯ ಮುಗಿಸುವ ಸಂಕಲ್ಪವನ್ನು ಬೋಧಿಸಿದರು.
ಶಾಂತಿನಾಥ ಸ್ವಾಮಿಯ ಮೂರ್ತಿಗೆ ವಜ್ರಲೇಪನ ಗರ್ಭಗುಡಿಯ ನೆಲಹಾಸು ಮತ್ತು ಗೋಡೆಗೆ ಗ್ರಾನೈಟ್ ನಮಸ್ಕಾರ ಮಂಟಪಗಳ ಆಧುನೀಕರಣ ಗೋಪುರ ನವೀಕರಣ ನೂತನ ಧ್ವಜಸ್ಥಂಭ ಅಮ್ಮನವರ ಬಸದಿಯ ಜೀರ್ಣೋದ್ಧಾರ ಕ್ಷೇತ್ರಪಾಲ ಗುಡಿ, ನಾಗಬಸದಿ ಅಭಿವೃದ್ಧಿ ನಡೆಯಲಿದೆ.
ಜೀರ್ಣೋದ್ಧಾರ ಸಮಿತಿಯ ಕಾರ‍್ಯಧ್ಯಕ್ಷ ಕೆ ಆಭಯ ಚಂದ್ರ ಜೈನ್, ಕ್ಷೇತ್ರದ ಆಡಳಿತದಾರರಾದ ಭಾಸ್ಕರ ಎಸ್ ಕಟ್ಟೆಮಾರ್ ಅವರ ಪುತ್ರ ಆನಂತ ಕೇಸರಿ, ಉಪಾಧ್ಯಕ್ಷರಾದ ಚೌಟರ ಅರಮನೆಯ ಕುಲದೀಪ ಎಂ, ಶ್ರೀನಾಥ ಬಲ್ಲಾಳ್, ರಾಜೇಂದ್ರ ಕುಮಾರ್ ಜೈನ್, ಕಾರ್ಯದರ್ಶಿಗಳಾದ ಮಿತ್ರಸೇನ ಇಂದ್ರ, ಸಂಪತ್ ಕುಮಾರ್, ರಂಜಿತ್ ತಮನಂಗಡಿ, ಕೋಶಾಧಿಕಾರಿ ಪುಷ್ಪರಾಜ್ ಜೈನ್, ಸದಸ್ಯರಾದ ಜಯರಾಜ್ ಕಂಬಳಿ, ಸ್ವಾಮಿ ಪ್ರಸಾದ್, ರಾಜೇಶ್, ವಿಲಾಸ್, ಸೂರಜ್ ಆರಿಗ, ಶಾಂತಿಕುಮಾರ್, ಸುವಿಧ ಇಂದ್ರ ಮತ್ತಿತರರು ಉಪಸ್ಥಿತರಿದ್ದರು. ಬಸದಿಯ ಅರ್ಚಕರಾದ ಗುಣವರ್ಮ ಇಂದ್ರ ಧಾರ್ಮಿಕ ವಿಧಿವಿಧಾನಗಳನ್ನು ನೆರವೇಹಿಸಿದರು.