ಮೂಡುಬಿದಿರೆ: ನಾಲ್ಕು ಕಂದಾಯ ಜಿಲ್ಲೆಗಳನ್ನೋಳಗೊಂಡ ರೋಟರಿ ಜಿಲ್ಲೆ (Rotary District) 3181 ಯು 2022-2023 ನೇ ಸಾಲಿನಲ್ಲಿ ಒಟ್ಟು 4.12ಕೋಟಿ ವೆಚ್ಚದಲ್ಲಿ ವಿವಿಧ ಸೇವಾ ಕಾರ‍್ಯಗಳನ್ನು ನಡೆಸಿದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಪ್ರಕಾಶ್ ಕಾರಂತ್ (Rotary District Governor Prakash Karanth) ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರಾಥಮಿಕ ಶಿಕ್ಷಣದ ಮೂಲಭೂತ ಸೌಕರ್ಯಗಳನ್ನು ಒದಗಿಸಲು 1 ಕೋಟಿ ನೀರು ಮತ್ತು ನೈರ್ಮಲ್ಯ ಉದ್ದೇಶಗಳಿಗಾಗಿ 13 ಲಕ,್ಷ ಪರಿಸರ ಸಂಬಧಿ ಕೆಲಸಗಳಿಗಾಗಿ 52 ಲಕ್ಷ, ಇತರ ಸಮಾಜಮುಖಿ ಕೆಲಸಗಳಿಗಾಗಿ 65 ಲಕ್ಷ, ತಾಯಿ ಮತ್ತು ಆರೋಗ್ಯ ಕಾರ್ಯಕ್ರಮಗಳಿಗೆ 1 ಲಕ್ಷ ವಿನಿಯೋಗಿಸಲಾಗಿದೆ. ವಿವಿಧ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳು, ರಕ್ತನಿಧಿ ಕೇಂದ್ರಗಳನ್ನು ತೆರೆಯಲಾಗಿದೆ. ಮಂಗಳೂರಿನಲ್ಲಿ ಸ್ತನ ಹಾಲಿನ ಕೇಂದ್ರವನ್ನು ತೆರೆಯಲಾಗಿದೆ ಎಂದರು. ಜಿಲ್ಲಾ ವ್ಯಾಪ್ತಿಯಲ್ಲಿ 87 ಕ್ಲಬ್ ಗಳು ಸಕ್ರಿಯವಾಗಿದ್ದು ಆಯಾ ಪ್ರದೇಶದ ಅವಶ್ಯಕತೆಗಳಿಗೆ ಸ್ಪಂದಿಸುತ್ತಿದೆ ಎಂದರು.
ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಅಧ್ಯಕ್ಷ (President of Rotary Club Moodbidire Temple Town) ಪ್ರವೀಣ್ ಪಿರೇರಾ ಮಾತನಾಡಿ, ಕ್ಲಬ್ ಈ ಸಾಲಿನಲ್ಲಿ ಕೋಡಂಗಲ್ಲಿನಲ್ಲಿ ರೋಟರಿ ವನ, ವಿವಿಧ ಬಸ್ಸು ತಂಗುದಾಣಗಳ ನವೀಕರಣ, ಟೆಂಪಲ್ ಟೌನ್ ಪಾರ್ಕ್ನಲ್ಲಿ ಸುರಕ್ಷತೆಯ ದೃಷ್ಠಿಯಿಂದ ಸಿಸಿ ಕ್ಯಾಮರಗಳನ್ನು(CC cameras) ಅಳವಡಿಸಿದೆ ಎಂದರು.
ಇದನ್ನ ಓದಿ: ಬಳಕೆದಾರರ ಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ಅರುಣ್ ಪ್ರಕಾಶ್ ಶೆಟ್ಟಿ ಆಯ್ಕೆ
ರೋಟರಿ ಜಿಲ್ಲಾ ಕಾರ‍್ಯದರ್ಶಿ ನಾರಾಯಣ ಹೆಗ್ಡೆ(Narayana Hegde, Rotary District Secretary,), ಉಪರಾಜ್ಯಪಾಲ ಎಂ. ವಿ ಭಟ್, ಝೋನಲ್ ಲೆಪ್ಟಿನೆಂಟ್ ವಿನ್ಸೆಂಟ್ ಡಿಕೋಸ್ತ, ಟೆಂಪಲ್ ಟೌನ್ ಕಾರ್ಯದರ್ಶಿ ಡಾ.ಅಮರದೀಪ್ ಉಪಸ್ಥಿತರಿದ್ದರು.