ಮೂಡುಬಿದಿರೆ: ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ (Our village our road project under) ಶಿರ್ತಾಡಿ ಗ್ರಾ.ಪಂ.ವ್ಯಾಪ್ತಿಯ ಅರ್ಜುನಾಪುರ ದೇವಸ್ಥಾನದಿಂದ (Arjunapur Temple) ಅಮಣಿ ಪರಿಶಿಷ್ಟ ಕಾಲನಿಗೆ ರೂ.2.33 ಕೋ.ವೆಚ್ಚದಲ್ಲಿ ನಿರ್ಮಾಣವಾಗಿರುವ ಸಂಪರ್ಕ ರಸ್ತೆಯನ್ನು ಶಾಸಕ ಉಮಾನಾಥ ಕೋಟ್ಯಾನ್ (MLA Umanatha Kotyan) ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಕೋಟ್ಯಾನ್ ಈ ಸಂಪರ್ಕ ರಸ್ತೆಯು ಇಲ್ಲಿನ ಜನರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ರಸ್ತೆ, ನೀರು ಮತ್ತು ದಾರಿದೀಪಗಳಿಗೆ ಆದ್ಯತೆಯನ್ನು ನೀಡಲಾಗುತ್ತಿದೆ ಎಂದರು.
ಇದನ್ನ ಓದಿ: ಮೂಡುಬಿದಿರೆಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾ ಸಮಾವೇಶ
ನೆಲ್ಲಿಕಾರು ಪಂಚಾಯತ್ ಅಧ್ಯಕ್ಷೆ ಸುಶೀಲಾ (Nellikaru Panchayat President Sushila) , ಸದಸ್ಯರಾದ ಜಯಂತ ಹೆಗ್ಡೆ, ಶಿರ್ತಾಡಿ ಗ್ರಾ.ಪಂ.ಸದಸ್ಯರಾದ ಸಂತೋಷ್ ಅಂಚನ್ , ಲತಾ ಹೆಗ್ಡೆ, ಸಂತೋಷ್ ಶೆಟ್ಟಿ, ನಾಗವೇಣಿ ಗುತ್ತಿಗೆದಾರ ಕಿರಣ್ , ನೆಲ್ಲಿಕಾರು ಗ್ರಾ.ಪಂಚಾಯತ್ ಸಿಬಂಧಿ ಪ್ರಶಾಂತ್ ಕುಮಾರ್ ಜೈನ್ ಈ ಸಂದರ್ಭದಲ್ಲಿದ್ದರು.