ಮೂಡುಬಿದಿರೆ: ತಮ್ಮ ಕ್ಷೇತ್ರದ ಗ್ರಾಪಂಗಳಲ್ಲಿ ಪಿಡಿಒ(PDO) ಹಾಗೂ ಗ್ರಾಮ ಲೆಕ್ಕಿಗರ ಕೊರತೆ ಹೆಚ್ಚಾಗಿದ್ದು ಖಾಲಿ ಇರುವ ಈ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ (MLA Umanatha Kotyan) ಆಗ್ರಹಿಸಿದ್ದಾರೆ.
ಇದನ್ನ ಓದಿ: ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ನಿವೃತ್ತ ನ್ಯಾಯಮೂರ್ತಿ ಅಬ್ದುಲ್ ನಝೀರ್
ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಅವರು, ಎರಡು ಮೂರು ಗ್ರಾಪಂಗಳಿಗೆ ಒಬ್ಬನೇ ಪಿ.ಡಿ.ಒ, ಐದಾರು ಗ್ರಾಮಗಳಿಗೆ ಒಬ್ಬ ಗ್ರಾಮ ಲೆಕ್ಕಿಗನನ್ನು ನೀಡಲಾಗಿದೆ. ಇದರಿಂದ ಜನಸಾಮಾನ್ಯರ ದೈನಂದಿನ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ ಎಂದು ಹೇಳಿದರು. ಇದಕ್ಕುತ್ತರಿಸಿದ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ (Public Works Minister CC Patil)ಅವರು ಪಿಡಿಒ, ಗ್ರಾಮ ಲೆಕ್ಕಿಗರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಸಿಗಲಿದೆ, ತುರ್ತು ಅವಶ್ಯಕತೆ ಇದ್ದ ಕಡೆಗಳಲ್ಲಿ ಬೇರೊಬ್ಬರ ನಿಯೋಜನೆಗೂ ಕ್ರಮ ಕೈಗೊಳ್ಳಲಾಗುವುದೆಂದರು.