ಮೂಡುಬಿದಿರೆ: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 2021-22ನೇ ಸಾಲಿಗೆ ಸಿಮಾಕ್ ಸಂಸ್ಥೆಯು (SIMAC Institute) ಮೂಡುಬಿದಿರೆ ಪುರಸಭೆಗೆ ಇಫೆಕ್ಟಿವ್ ಇಂಪ್ಲಿಮೆಂಟೇಶನ್ ಆಫ್ ಝೀರೋ ವೇಸ್ಟ್ ಆಫೀಸ್ (Effective Implementation of Zero Waste Office) ಸ್ಪೆಶಲ್ ಮೆನ್ಶನ್ -ಬೆಸ್ಟ್ ಪ್ರಾಕ್ಟಿಸ್ ಪ್ರಶಸ್ತಿ (Special Mention – Best Practice Award) ನೀಡಿದೆ.
ಇದನ್ನ ಓದಿ: ಕಡಂದಲೆಯಲ್ಲಿ ವಿದ್ಯುತ್ ಕೇಂದ್ರ ಸ್ಥಾಪನೆ: ಸಾರ್ವಜನಿಕರಿಂದ ಅಹವಾಲು ಸ್ವೀಕಾರ
ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವ ಎ.ಟಿ.ಬಿ ನಾಗರಾಜ (Municipal Administration and Small Industries Minister ATB Nagaraja) ಅವರು ವಿಧಾನ ಸೌಧದಲ್ಲಿ ಸೋಮವಾರ ಸಿಮಾಕ್ ಸಂಸ್ಥೆಯ ಹಾಗೂ ಪೌರಾಡಳಿತ ಇಲಾಖೆಯ ಸಹಯೋಗದೊಂದಿಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು. ಪುರಸಭೆ ಮುಖ್ಯಾಧಿಕಾರಿ ಇಂದು ಎಂ (Municipal chief Indu M) ಹಾಗೂ ಪರಿಸರ ಅಭಿಯಂತರ ಶಿಲ್ಪಾಎಸ್. ಪ್ರಶಸ್ತಿ ಸ್ವೀಕರಿಸಿದರು.