ಮೂಡುಬಿದಿರೆ: ಮೂಲ್ಕಿ, ಮೂಡುಬಿದಿರೆ ತಾಲೂಕುಗಳನ್ನು ಒಳಗೊಂಡ ಬಳಕೆದಾರ ಜಾಗೃತಿ ವೇದಿಕೆ(User Awareness Forum) ಕಿನ್ನಿಗೋಳಿ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸಮಾಜಮಂದಿರದಲ್ಲಿ ನಡೆಯಿತು.
ಶಾಸಕ ಉಮಾನಾಥ ಎ.ಕೋಟ್ಯಾನ್(Umanatha Kotian)ಕಾರ್ಯಕ್ರಮ ಉದ್ಘಾಟಿಸಿದರು. ಬಳಕೆದಾರರು ಉತ್ತಮ ಗುಣಮಟ್ಟದ ವಸ್ತುವೆಂದು ಅರಿತು ತೆಗೆದುಕೊಂಡಾಗ ಅದು ಅವಧಿ ಮೀರಿದ ವಸ್ತುವಾಗಿದ್ದರೆ ಅದನ್ನು ಮಾರಾಟ ಮಾಡುತ್ತಿದ್ದರೆ ಪ್ರತಿಭಟಿಸುವಂತಹ ಕೆಲಸಗಳಾಗಬೇಕಿದೆ. ದೂರುಗಳು ಬಂದಾಗ ಅದರ ಬಗ್ಗೆ ಸರಿಯಾಗಿ ಪರಿಶೀಲನೆ ನಡೆಸಿ ತನಿಖೆ ನಡೆಸಬೇಕು. ಅಸಹಾಯಕರಿಗೆ, ಬಡವರಿಗೆ ತೊಂದರೆಯಾಗದಂತೆ ಪ್ರಾಮಾಣಿಕ ರೀತಿಯಲ್ಲಿ ನ್ಯಾಯ ಒದಗಿಸುವಂತಹ ಜವಾಬ್ದಾರಿ ಬಳಕೆದಾರರ ವೇದಿಕೆಗಿದೆ ಎಂದರು.
ನೂತನ ಅಧ್ಯಕ್ಷ ಅರುಣ್ ಪ್ರಕಾಶ್ ಶೆಟ್ಟಿ(Arun Prakash Shetty) ಅಧ್ಯಕ್ಷತೆ ವಹಿಸಿದರು. ಬಳಕೆದಾರರ ಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ(Founder) ಪದ್ಮನಾಭ ಶೆಟ್ಟಿ ಅವರನ್ನು ದಂಪತಿ ಸಹಿತ ಸನ್ಮಾನಿಸಲಾಯಿತು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್(Abhayachandra Jain), ವೇದಿಕೆಯ ಪ್ರಧಾನ ಕಾರ್ಯದರ್ಶಿ ಡಾ.ಶಿವರಾಜ್ ಅರಸ್, ಜೊತೆ ಕಾರ್ಯದರ್ಶಿ ದಯಾನಂದ ನಾಯ್ಕ್, ಸಂಯೋಜಕ ಡಾ.ರವೀಶ್ ಕುಮಾರ್ ಎಂ. ಉಪಸ್ಥಿತರಿದ್ದರುಪತ್ರಕರ್ತ ಜೈಸನ್ ತಾಕೋಡೆ ಸ್ವಾಗತಿಸಿದರು. ಉಪನ್ಯಾಸಕಿ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು. ಅರುಣ್ ಶೆಟ್ಟಿ ವಂದಿಸಿದರು.