ಮೂಡುಬಿದಿರೆ: ವಾಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ (Valpadi Gram Panchayat Area) 2022-23ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯಲ್ಲಿ ಬೆರಳೆಣಿಕೆಯ ಗ್ರಾಮಸ್ಥರು ಭಾಗವಹಿಸಿದ್ದು, ಪ್ರಮುಖ ಚರ್ಚೆಗಳಿಲ್ಲದೆ ಸೊರಗಿತ್ತು.
ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷ ಪ್ರದೀಪ್ ಕುಮಾರ್ (Gram Panchayat President Pradeep Kumar), ಗ್ರಾಮಸಭೆಗಳಿರುವುದು ಗ್ರಾಮಸ್ಥರಿಗಾಗಿ. ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಮಕ್ತವಾಗಿ ಜನಪ್ರತಿನಿಧಿಗಳು, ಅಧಿಕಾರಿಗಳ ಮುಂದಿಡಬಹುದು. ಗ್ರಾಮಸಭೆಯ (Gram Sabha) ಕುರಿತು ಪಂಚಾಯಿತಿ ಕಡೆಯಿಂದ ಸರಿಯಾದ ರೀತಿಯಲ್ಲಿ ಪ್ರಚಾರ ಮಾಡಿದ್ದೇವೆ. ವಾರ್ಡ್ಗಳ ಪ್ರಮುಖ ರಸ್ತೆಗಳಲ್ಲಿ ಅನೌನ್ಸ್ ಕೂಡ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಮಾಜಿ ಉಪಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ (Former Vice President Arun Kumar Shetty) ಮಾತನಾಡಿ, ಗ್ರಾಪಂ ವ್ಯಾಪ್ತಿಯ ಉಡ್ರೆಜಾಲು, ಪಾಪ್ಲಾಡಿ, ಹಲೆಂಜಾರಿನಲ್ಲಿ ಚಿರತೆಗಳ ಕಾಟ ಹೆಚ್ಚಾಗಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಅರಣ್ಯ ಇಲಾಖೆ (Forest Department) ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು. ಅಲ್ಲಲ್ಲಿ ಬೋನುಗಳನ್ನು ಇಡಲಾಗಿದೆ ಎಂದು ಅರಣ್ಯಾಧಿಕಾರಿ ಸೌಮ್ಯ(Forest Department officer Sowmya) ಉತ್ತರಿಸಿದರು.
ಅಳಿಯೂರು ಪ್ರೌಡಶಾಲೆಗೆ ಹೋಗುವ ರಸ್ತೆ ನಾದುರಸ್ತಿಯಲ್ಲಿದೆ ಎಂದು ಗ್ರಾಮಸ್ಥೆ ಚಂಪಾ ಶೆಟ್ಟಿ ಸಭೆಯ ಗಮನಕ್ಕೆ ತಂದರು. ಈ ಕುರಿತು ಅನುದಾನಕ್ಕಾಗಿ ಶಾಸಕರಲ್ಲಿ ಬೇಡಿಕೆ ಇಟ್ಟಿದ್ದೇವೆ ಎಂದು ಅಧ್ಯಕ್ಷರು ತಿಳಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಶುಚಿತ್ವಕ್ಕೆ ಆಧ್ಯತೆ ನೀಡಲಾಗಿದ್ದು, ಅಲ್ಲಲ್ಲಿ ಕಸ ಬಿಸಾಡುತ್ತಿರುವವರಿಗೆ ದಂಡ ವಿಧಿಸಲಾಗುತ್ತಿದೆ ಎಂದು ಪಿಡಿಒ ರಮೇಶ್ ರಾಥೋಡ್ ತಿಳಿಸಿದರು. ಅಳಿಯೂರು ಹೈಸ್ಕೂಲ್ (Aliyur High School) ಹಿಂಬದಿಯಲ್ಲಿ ಕಸ ಹೆಚ್ಚಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದರು.
ಪಶುಗಳಲ್ಲಿ ಚರ್ಮಗಂಟು ರೋಗ ಹೆಚ್ಚಾಗಿದ್ದು, ಅದಕ್ಕೆ ಸೂಕ್ತ ರೀತಿಯಲ್ಲಿ ವ್ಯಾಕ್ಸಿನ್ ನೀಡುತ್ತಿದ್ದೇವೆ. ಅದು ಕೊರೊನಾ ಮಾದರಿಯ ವೈರಸ್ ಆಗಿರುವುದರಿಂದ ಅದಕ್ಕಂತಲೇ ಔಷಧಿಯಿಲ್ಲ ಪಕ್ಕದ ಬೆಳ್ತಂಗಡಿ ತಾಲೂಕುಗಿಂತ ಮೂಡುಬಿದಿರೆ ತಾಲೂಕು ಚರ್ಮ ಗಂಟು ರೋಗ (Skin nodule disease) ನಿಯಂತ್ರಣದಲ್ಲಿ ಮುಂದಿದೆ ಎಂದು ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗುರುಪ್ರಸಾದ್ (Assistant Director of Animal Husbandry Department Dr. Guruprasad) ತಿಳಿಸಿದರು.
ಇದನ್ನ ಓದಿ: ತಾಲೂಕು ಪಂಚಾಯತ್ ನೂತನ ಕಟ್ಟಡಕ್ಕೆ ಉಮಾನಾಥ ಕೋಟ್ಯಾನ್ ಶಿಲಾನ್ಯಾಸ ಕಾರ್ಯಕ್ರಮ
ಉಪಾಧ್ಯಕ್ಷೆ ಸುಶೀಲಾ, ಕಾರ್ಯದರ್ಶಿ ಶೇಖರ್, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿದ್ದರು.