ಮೂಡುಬಿದಿರೆ: ತೋಡಾರಿನಲ್ಲಿರುವ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ (Yenepoya Technical University) 2022 -23 ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ (Swaraj Maidan) ಮಂಗಳವಾರ ನಡೆಯಿತು.
ಅಂತಾರಾಷ್ಟ್ರೀಯ ಕ್ರೀಡಾಪಟು ಬಾಬು ಶೆಟ್ಟಿ (International Sportsman Babu Shetty) ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಬಲೂನುಗಳನ್ನು ಬಾನೆತ್ತರಕ್ಕೆ ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿದರು. ನಂತರ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿ ಜೀವನದಲ್ಲಿ ಶಿಸ್ತು ಮುಖ್ಯ ಅದರಂತೆ ಕ್ರೀಡೆಯಲ್ಲಿಯೂ ಶಿಸ್ತನ್ನು ಅಳವಡಿಸಿಕೊಂಡಾಗ ಯಶಸ್ಸು ಸಾಧ್ಯ ಎಂದು ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.
ಇದನ್ನ ಓದಿ: ಆದಿ ಗ್ರಾಮೋತ್ಸವ ರಜತ ಸಂಭ್ರಮ: ತುಳುವ ಸಾಧಕರಿಗೆ ನಮನ
ಯೆನೆಪೋಯ ಸಮೂಹದ ಕಾರ್ಯಾಚರಣೆಗಳ ನಿರ್ದೇಶಕ ಯೆನೆಪೋಯ ಅಬ್ದುಲ್ಲಾ ಜಾವೇದ್ ಗೌರವ ಅತಿಥಿಗಳಾಗಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ. ಆರ್. ಜಿ ಡಿ ‘ಸೋಜ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರೊ.ಸಾಯೀಶ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಲೋಕೇಶ್ (Physical Education Director Lokesh) ವಾರ್ಷಿಕ ವರದಿ ನೀಡಿದರು. ಕ್ರೀಡಾಪಟುಗಳಾದ ಸುಲೈಮಾನ್ ಸುಹೈಲ್, ಪ್ರಣೀತ್ ಶೆಟ್ಟಿ, ಸುಶ್ರುತ ಕೆ.ಟಿ, ಅಫ್ರೀನ್ ಬಿ.ಎಂ. ಕ್ರೀಡಾ ಜ್ಯೋತಿಯನ್ನು (Sports torch) ಪ್ರಜ್ವಲಿಸಿದರು. ಕಾಲೇಜಿನ ಕ್ಯಾಂಪಸ್ ಆಡಳಿತಾಧಿಕಾರಿ ಬಿ ಮೊಹಮ್ಮದ್ ಶಾಹಿಂ ಪ್ರಾರ್ಥಿಸಿದರು. ಅನ್ವಿತಾ ಕಾರ್ಯಕ್ರಮ ನಿರೂಪಿಸಿದರು. ಆರ್ಟಫ಼ಿಶಿಯಲ್ ಇಂಟೆಲಿಜೆನ್ಸ್ ವಿಭಾಗ ಮುಖ್ಯಸ್ಥ (Head of Artificial Intelligence Division) ಪ್ರೊ.ಪ್ರಸನ್ನ ಕುಮಾರ್ ವಂದಿಸಿದರು.