ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ(Paladka Village Panchayat) ವ್ಯಾಪ್ತಿಯ ಕೇಮಾರುವಿನ ಪಲ್ಲದಮೇಲು ಎಂಬಲ್ಲಿ ಜಲಜೀವನ್ ಮಿಷನ್(Jalajeevan mission) ಅಡಿಯಲ್ಲಿ 4.25 ಲಕ್ಷ ಲೀಟರ್ ಹಾಗೂ 0.75 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್(Water Tank)ಳ ನಿರ್ಮಾಣಕ್ಕೆ ಶಾಸಕ ಉಮಾನಾಥ ಎ.ಕೋಟ್ಯಾನ್(Umanatha Kotian)ಶಿಲಾನ್ಯಾಸ ನೆರವೇರಿಸಿದರು.
ಪಾಲಡ್ಕ ಗ್ರಾಪಂ ಅಧ್ಯಕ್ಷ ದಿನೇಶ್ ಕಾಂಗ್ಲಾಯಿ, ಉಪಾಧ್ಯಕ್ಷ ಸುಕೇಶ್ ಶೆಟ್ಟಿ, ಸದಸ್ಯೆ ಹರಿಣಿ, ಬೆಳುವಾಯಿ ಗ್ರಾಪಂ ಸದಸ್ಯ ಭರತ್ ಶೆಟ್ಟಿ, ಸೂರಜ್ ಆಳ್ವ, ಜಯಂತಿ, ಗುತ್ತಿಗೆದಾರ ಸುಧಾಕರ ಶೆಟ್ಟಿ, ಪುತ್ತಿಗೆ ಗ್ರಾಪಂ ಮಾಜಿ ಸದಸ್ಯ ಶಶಿಧರ್ ಅಂಚನ್ ಎನಿಕ್ರಿಪಲ್ಲ, ಇಂಜಿನಿಯರ್ ಸುಂದರ್ ಮತ್ತು ರಶ್ಮಿ ಉಪಸ್ಥಿತರಿದ್ದರು.