ಮೂಡುಬಿದಿರೆ: ರಾಣೆಯಾರ್ ಸಮಾಜ ಸೇವಾ ಸಂಘ(ರಿ)ಕೊಡಂಗಲ್ಲು (Raneyar Samaj Seva Sangh(R)Kodangallu)ಇದರ ವತಿಯಿಂದ 12ನೇ ಅಖಿಲ ಕರ್ನಾಟಕ ರಾಣೆಯಾರ್ ಸಮಾವೇಶ (12th-2023All Karnataka Raneyar Convention-2023) ಭಾನುವಾರ ಕೊಡಂಗಲ್ಲು ಮಹಮ್ಮಾಯಿ ದೇವಸ್ಥಾನದ (Kodangallu Mahammai Temple) ಬಯಲು ರಂಗ ಮಂದಿರದಲ್ಲಿ ನಡೆಯಿತು.
ಕೊಡಂಗಲ್ಲು ಮಹಮ್ಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರ ದೇಜು ದೀಪ ಬೆಳಗಿಸುವ ಮೂಲಕ ಸಮಾವೇಶವನ್ನು ಉದ್ಘಾಟಿಸಿದರು.
ಶಾಸಕ ಉಮಾನಾಥ ಕೋಟ್ಯಾನ್(MLA Umanatha Kotyan) ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ರಾಣೆಯಾರ್ ಸಮಾಜ ಬಾಂಧವರು ರಾಣಿಬೆನ್ನೂರಿನಿಂದ ಕೂಲಿ ಕಾರ್ಮಿಕರಾಗಿ ಕರಾವಳಿಗೆ ಬಂದವರು. ಇಲ್ಲಿ ಬಂದು ತಮ್ಮ ದೇವಸ್ಥಾನವನ್ನು ಸ್ಥಾಪಿಸಿ ತಮ್ಮ ಸಮಾಜವನ್ನು ಅಭಿವೃದ್ಧಿಗೊಳಿಸುವ ಮೂಲಕ ಸಂಘಟನೆಗೆ ಹೆಚ್ಚಿನ ಒತ್ತನ್ನು ನೀಡುತ್ತಾ ಬಂದಿದ್ದಾರೆ.
ತಮ್ಮ ಸಮಾಜದ ಮಕ್ಕಳಿಗೆ ಉತ್ತಮ ವಿದ್ಯೆಯನ್ನು ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಹಾಗೂ ಸರಕಾರದ ಸವಲತ್ತುಗಳನ್ನು ಪಡೆದುಕೊಳ್ಳುವ ಮೂಲಕ ಸಮಾಜವನ್ನು ಗಟ್ಟಿಗೊಳಿಸಬೇಕೆಂದ ಅವರು, ಶಾಸಕನಾಗಿ ತನ್ನಿಂದ ಏನಾದರೂ ಕೆಲಸಕಾರ್ಯಗಳು ಆಗಬೇಕಾದರೆ ತನ್ನ ಸಹಕಾರ ಸದಾ ನಿಮಗೆ ನೀಡಲು ಸಿದ್ದ ಎಂದರು.
ರಾಜ್ಯ ರಾಣೆಯಾರ್ ಸಂಘದ ಸ್ಥಾಪಕಧ್ಯಕ್ಷ ಸೂರಪ್ಪ ರಾಣೆಯಾರ್ ಕೊಕ್ಕಡ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ (Former Minister K. Abhayachandra Jain) ಅತಿಥಿಯಾಗಿ ಭಾಗವಹಿಸಿ ಮಾತನಾಡಿ ರಾಣೆಯಾರ್ ಸಮಾಜದವರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಕಲ್ಪಿಸಿದ ಉನ್ನತ ಶಿಕ್ಷಣದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಇದನ್ನ ಓದಿ: ದರೆಗುಡ್ಡೆಯಿಂದ ಶ್ರೀ ಆದಿಶಕ್ತಿ ದೇವಸ್ಥಾನದವರೆಗೆ ನಿರ್ಮಾಣವಾಗಿರುವ ರಸ್ತೆ ಉದ್ಘಾಟನೆ
ಸನ್ಮಾನ : ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ.ಶ್ರೀದೇವಿ ಕಾರ್ಕಳ( ಶಿಕ್ಷಣ), ಬಿ.ಎಂ.ಹುಕ್ರು( ಸೂಲಗಿತ್ತಿ), ದೇಜು (ಧಾರ್ಮಿಕ ಕ್ಷೇತ್ರ), ಶಿವಪ್ರಸಾದ್ (ಕೊಳಲು ವಾದಕ), ಮಹಿಳಾ ಮಂಡಳಿಯ ಅಧ್ಯಕ್ಷೆ ವನಜಾ ಹಾಗೂ ಜಯಪ್ರಕಾಶ್ ಅವರ ಮರಣೋತ್ತರ ಪ್ರಶಸ್ತಿಯನ್ನು ಪತ್ನಿ ಪ್ರಭಾ ಅವರಿಗೆ ನೀಡಿ ಗೌರವಿಸಲಾಯಿತು.
ಪುರಸಭಾ ಸದಸ್ಯರಾದ ಕೊರಗಪ್ಪ, ಸುರೇಶ್ ಪ್ರಭು, ಎ.ಜಿ.ಸೋನ್ಸ್ ಐ.ಟಿ.ಐ ಕೊಡಂಗಲ್ಲು ಇದರ ತರಬೇತಿ ಅಧಿಕಾರಿ ಶಿವಪ್ರಸಾದ್ ಹೆಗ್ಡೆ, ಅಖಿಲ ಕರ್ನಾಟಕ ರಾಣೆಯಾರ್ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಜಯರಾಣೆ ಕಾಪು, ಉಪಾಧ್ಯಕ್ಷ ಸುಂದರೇಶ್, ಕೋಶಾಧಿಕಾರಿ ಶ್ರೀನಿವಾಸ ಕಾಪು,ಉದ್ಯಮಿಗಳಾದ ತಂಗರಾಜ್, ಜಾನ್ಸಿ ಡಿ’ಸೋಜಾ, ಮೂಡುಬಿದಿರೆ ವಲಯದ ಅಧ್ಯಕ್ಷ ರಮೇಶ್ ಕೆ.ಎಸ್., ಉಪಾಧ್ಯಕ್ಷೆ ಕೋಕಿಲಾ ಸಂತೋಷ್, ಸದಸ್ಯ ಸದಾನಂದ, ಬೆದ್ರ ಫ್ರೆಂಡ್ಸ್ ನ ಪ್ರಕಾಶ್, ಎಂ.ಬಿ.ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಹಮ್ಮಾಯಿ ದೇವಸ್ಥಾನದ ಮಾಜಿ ಗೌರವಾಧ್ಯಕ್ಷ ಶೇಖರ್, ಸಂಘದ ಸದಸ್ಯರು ಉಪಸ್ಥಿತರಿದ್ದರು.
ಮಹಿಳಾ ಸಂಘದ ಕವಿತಾ ಸ್ವಾಗತಿಸಿದರು. ರಾಜ್ಯ ಸಂಘದ (State level) ಕಾರ್ಯದರ್ಶಿ ಕೃಷ್ಣಪ್ಪ ನೆಲ್ಯಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಡಂಗಲ್ಲು ಮಹಮ್ಮಾಯಿ ದೇವಸ್ಥಾನದ ಮಾಜಿ ಕಾರ್ಯದರ್ಶಿ ಹರೀಶ್ ಕಾರ್ಯಕ್ರಮ ನಿರೂಪಿಸಿದರು.